ಭಾರತ, ಏಪ್ರಿಲ್ 30 -- ಉಡುಪಿ: ಕೆಲ ದಿನಗಳ ಹಿಂದೆ ಉಡುಪಿ ಜಿಲ್ಲೆಯಲ್ಲಿ ಸಣ್ಣ ಪ್ರಮಾಣದ ಮಳೆ ಸುರಿದಿತ್ತು. ತತ್ಪರಿಣಾಮವಾಗಿ ಈಗ ಕೆಲವೆಡೆ ಡೆಂಗ್ಯೂ ಭೀತಿ ಎದುರಾಗಿದೆ. ವಲಸೆ ಕಾರ್ಮಿಕರು ಹೆಚ್ಚಾಗಿ ಇರುವ ಪ್ರದೇಶಗಳ ಸಹಿತ ಈ ಪ್ರಕರಣಗಳು ಕಂಡುಬರುವ ಜಾಗಗಳಲ್ಲಿ ಆರೋಗ್ಯ ಇಲಾಖಾಧಿಕಾರಿಗಳು ನಿಗಾ ವಹಿಸಿದ್ದಾರೆ. ಉಡುಪಿಯಲ್ಲಿ ಲಾರ್ವಾ ಸಮೀಕ್ಷೆ ಆರಂಭವಾಗಿದೆ. ಜ್ವರ ಪ್ರಕರಣಗಳಲ್ಲಿ ಡೆಂಗ್ಯೂ ಇರುವ ಪ್ರಕರಣಗಳೂ ಕಾಣಿಸಿದ ಕಾರಣ, ಆರೋಗ್ಯ ಅಧಿಕಾರಿಗಳು ತ್ವರಿತ ಕ್ರಮಕ್ಕೆ ಮುಂದಾಗಿದ್ದಾರೆ.

ಉಡುಪಿ ಜಿಲ್ಲಾ ಆರೋಗ್ಯ ಇಲಾಖೆ ಸಮಗ್ರ ಲಾರ್ವಾ ಸಮೀಕ್ಷೆಯನ್ನು ಪ್ರಾರಂಭಿಸಿದೆ. ಮಳೆಯ ನಂತರ ಉಡುಪಿ ಜಿಲ್ಲೆಯಲ್ಲಿ ಡೆಂಗ್ಯೂ ಜ್ವರ ಪ್ರಕರಣಗಳು ಹೆಚ್ಚಾಗುತ್ತಿದೆ. ಈವರೆಗೆ 47 ಪ್ರಕರಣಗಳು ಈವರೆಗೆ ದಾಖಲಾಗಿವೆ. ನಗರ ಪ್ರದೇಶಗಳನ್ನು ಗಮನದಲ್ಲಿಟ್ಟುಕೊಂಡು ಇಲಾಖೆಯು ಜಿಲ್ಲೆಯಾದ್ಯಂತ ಲಾರ್ವಾ ನಿವಾರಕ ಹಾಗೂ ಸೊಳ್ಳೆ ನಿರ್ಮೂಲನಾ ಕಾರ್ಯಕ್ರಮ ಆರಂಭಿಸಿದೆ.

ಈ ವರ್ಷದ ಜನವರಿಯಿಂದ ಉಡುಪಿಯಲ್ಲಿ ಈಗಾಗಲೇ 47 ಡೆಂಗ್ಯೂ ಪ್ರಕರಣಗಳು ವರದಿಯಾಗಿವ...