Bengaluru,ಬೆಂಗಳೂರು, ಮೇ 4 -- ಬೆಂಗಳೂರು: ಬೇಸಿಗೆ ರಜೆಯ ಕಾರಣ ವಿವಿಧೆಡೆ ಪ್ರಯಾಣಿಕ ದಟ್ಟಣೆ ಕಂಡುಬಂದಿರುವ ಕಾರಣ ಭಾರತೀಯ ರೈಲ್ವೆ (Indian Railways) ಕರ್ನಾಟಕದಲ್ಲಿ 9 ವಿಶೇಷ ರೈಲು ಸಂಚಾರವನ್ನು ಪ್ರಕಟಿಸಿದೆ. ಕರ್ನಾಟಕದ ವಿವಿಧ ನಿಲ್ದಾಣಗಳಿಂದ ಮತ್ತು ನಿಲ್ದಾಣಗಳಿಗೆ ಈ ರೈಲು ಸಂಚಾರ ಇರಲಿದೆ. ಬಹುತೇಕ ಎಲ್ಲ ಸಂಚಾರವೂ ಒನ್‌ ವೇ ಆಗಿರಲಿದೆ. ನೈಋತ್ಯ ರೈಲ್ವೆ ನಿರಂತರವಾಗಿ ಬೇಸಿಗೆ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚಾರವನ್ನು ನಿರ್ವಹಿಸುತ್ತ ಬಂದಿದ್ದು, ಆಯಾ ದಿನಗಳ ಅಗತ್ಯಗಳಿಗೆ ಅನುಗುಣವಾಗಿ ಮುಂಚಿತವಾಗಿಯೆ ಈ ರೈಲುಗಳ ಸಂಚಾರದ ವಿವರಗಳನ್ನು ಪ್ರಕಟಿಸುತ್ತಿದೆ.

ಇದರಂತೆ, ಮೇ 3ರಿಂದೀಚೆಗೆ 18ರ ತನಕ ವಿವಿಧ ದಿನಾಂಕಗಳಲ್ಲಿ ಸಂಚರಿಸುವ 9 ವಿಶೇಷ ರೈಲುಗಳ ವೇಳಾಪಟ್ಟಿ ಮತ್ತು ಇತರೆ ವಿವರಗಳನ್ನು ನೈಋತ್ಯ ರೈಲ್ವೆ ನೀಡಿದೆ. ಇದಲ್ಲದೆ, ಒಂದು ರೈಲಿನ ವಿಸ್ತರಣೆಯ ಸಂಚಾರವನ್ನು ಕಡಿತಗೊಳಿಸಿದೆ. ಅಲ್ಲಿ, ಪ್ರಯಾಣಿಕ ದಟ್ಟಣೆ ಕಡಿಮೆಯಾಗಿ ಸಂಚಾರ ನಿರ್ವಹಣೆ ಕಷ್ಟವಾದ ಕಾರಣ ರೈಲ್ವೆ ಈ ಕ್ರಮ ತೆಗೆದುಕೊಂಡಿದೆ ಎಂದು ಮೂಲಗಳು ತ...