ಭಾರತ, ಮೇ 4 -- ಹಿಂದೂಗಳು ಆಚರಿಸುವ ಪ್ರಮುಖ ಆಚರಣೆಗಳಲ್ಲಿ ಪ್ರದೋಷವು ಒಂದು. ಪ್ರದೋಷಗಳಲ್ಲಿ ರವಿ ಪ್ರದೋಷ ವಿಶೇಷ. ಪ್ರದೋಷ ಎನ್ನುವುದು ಶಿವನಿಗೆ ಸಮರ್ಪಿತವಾಗಿದ್ದು. ಈ ಪ್ರಮುಖ ದಿನದಂದು ಜನರು ಉಪಾವಾಸ ವ್ರತ ಆಚರಿಸುವ ಮೂಲಕ ದೇವರ ಕೃಪೆಗೆ ಪಾತ್ರರಾಗಲು ಬಯಸುತ್ತಾರೆ. ಪ್ರತಿ ತಿಂಗಳು 2 ಬಾರಿ ಅಂದರೆ ಶುಕ್ಲ ಪಕ್ಷ ಹಾಗೂ ಕೃಷ್ಣಪಕ್ಷಗಳಂದು ಪ್ರದೋಷ ವ್ರತಗಳನ್ನು ಆಚರಿಸಲಾಗುತ್ತದೆ. ಈ ವರ್ಷ ಪ್ರದೋಷ ವ್ರತವು ಭಾನುವಾರ ಬಂದಿರುವ ಕಾರಣ ಇದನ್ನು ರವಿ ಪ್ರದೋಚ ವ್ರತ ಎಂದು ಕರೆಯಲಾಗುತ್ತದೆ. ರವಿ ಪ್ರದೋಷ ವ್ರತವು ವೈಶಾಖ ಮಾಸ ಕೃಷ್ಣ ಪಕ್ಷ ತ್ರಯೋದಶಿ ತಿಥಿಯಂದು ಬರುತ್ತದೆ. ಈ ವರ್ಷ ಮೇ 5 ರಂದು ರವಿ ಪ್ರದೋಷ ತಿಥಿ ಇದೆ.

* ಮೇ 5 2024ರ ಸಂಜೆ 5.41ಕ್ಕೆ ತ್ರಯೋದಶಿ ತಿಥಿ ಆರಂಭವಾಗುತ್ತದೆ.

* ಮೇ 6 2024 ಮಧ್ಯಾಹ್ನ 2.40ಕ್ಕೆ ತ್ರಯೋದಶಿ ತಿಥಿ ಮುಕ್ತಾಯವಾಗುತ್ತದೆ.

* ಪೂಜಾ ಸಮಯ: ಮೇ 5 ರ ಸಂಜೆ 6.12 ರಿಂದ ರಾತ್ರಿ 8.24ರವರೆಗೆ.

ಪ್ರದೋಷ ವ್ರತವನ್ನು ಶಿವ ಹಾಗೂ ಪಾರ್ವತಿ ದೇವಿಯನ್ನು ಪೂಜಿಸಲು ಸಮರ್ಪಿಸಲಾಗಿದೆ. ಭಗವಾ...