ಭಾರತ, ಏಪ್ರಿಲ್ 19 -- ಬೇಸಿಗೆಯ ಸುಡು ಬಿಸಿಲಿನ ತಾಪಮಾನ ಹೆಚ್ಚಿದ್ದು, ಜನಸಾಮಾನ್ಯರು ಎಳನೀರು, ಜ್ಯೂಸ್, ಮಜ್ಜಿಗೆ ಮುಂತಾದ ತಂಪಾದ ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಬೇಸಿಗೆಯಲ್ಲಿ ನಮ್ಮ ಆಹಾರಕ್ರಮವು ವಿಭಿನ್ನವಾಗಿರುತ್ತದೆ. ಈ ಸಮಯದಲ್ಲಿ ತೂಕನಷ್ಟವೂ ಆಗಬಹುದು. ಕೆಲವರು ಹೆಚ್ಚು ಆಹಾರ ಸೇವಿಸಿದ್ರೆ, ಇನ್ನೂ ಕೆಲವರು ಕಡಿಮೆ ಆಹಾರ ಸೇವಿಸುತ್ತಾರೆ. ಇನ್ನು ಸಾಕುಪ್ರಾಣಿಗಳ ಗತಿಯೇನು?

ಸುಡುವ ಬೇಸಿಗೆಯ ಶಾಖವು ನಮ್ಮ ಮೇಲೆ ಮಾತ್ರವಲ್ಲ ಸಾಕುಪ್ರಾಣಿಗಳ ಮೇಲೆಯೂ ಪರಿಣಾಮ ಬೀರುತ್ತದೆ. ಬೇಸಿಗೆ ತಿಂಗಳಿನಲ್ಲಿ ನಿಮ್ಮ ಸಾಕುಪ್ರಾಣಿಗಳಿಗೆ ಯಾವ ಪೌಷ್ಟಿಕಾಂಶದ ಅಗತ್ಯವಿದೆ? ಇಂಥ ಋತುವಿನಲ್ಲಿ ಅದರ ಆಹಾರವನ್ನು ಬದಲಾಯಿಸಬೇಕೇ ಎಂಬಿತ್ಯಾದಿ ಪ್ರಶ್ನೆಗಳು ನಿಮ್ಮಲ್ಲಿ ಮೂಡುತ್ತಿರಬಹುದು. ನಿಮ್ಮ ಸಾಕುಪ್ರಾಣಿಗಳು ಸರಿಯಾದ ಆಹಾರಕ್ರಮದಲ್ಲಿದ್ದರೆ, ಬೇಸಿಗೆಯ ತಿಂಗಳುಗಳಲ್ಲಿ ಅದನ್ನು ಬದಲಾಯಿಸುವ ಅಗತ್ಯವಿಲ್ಲ. ನಿಮ್ಮ ನಾಯಿ ಅಥವಾ ಬೆಕ್ಕು ಅಲರ್ಜಿ, ಸ್ಥೂಲಕಾಯ ಅಥವಾ ಸಂಧಿವಾತ ಮುಂತಾದ ಸಮಸ್ಯೆಗಳನ್ನು ಹೊಂದಿದ್ದರೆ, ನೀವು ಕೆಲವು ಆಹಾರದ ...