ಭಾರತ, ಮೇ 3 -- ದೇಹದ ಅಂಗಾಂಗಗಳು ಹೇಗಿರುತ್ತವೆ ಎಂಬುದರ ಮೇಲೆ ನಮ್ಮ ವ್ಯಕ್ತಿತ್ವ ನಿರ್ಧಾರ ಆಗುತ್ತದೆ ಎನ್ನುವುದು ಆಶ್ಚರ್ಯದ ಸಂಗತಿಯಾದ್ರು ಇದು ನಿಜ. ಕಣ್ಣು, ಮೂಗು, ಹುಬ್ಬು, ಕಿವಿ ಹೀಗೆ ಪ್ರತಿಯೊಂದು ನಮ್ಮ ವ್ಯಕ್ತಿತ್ವ, ಗುಣವನ್ನು ಪರಿಚಯ ಮಾಡುತ್ತವೆ. ಕೆಲವು ನಮಗೆ ಗೊತ್ತಿಲ್ಲದೇ ನಮ್ಮಲ್ಲಿ ರಹಸ್ಯವಾಗಿರುವ ವ್ಯಕ್ತಿತ್ವವನ್ನು ಹೊರ ಹಾಕುತ್ತವೆ. ಇಂದು ಪಾದ ಹಾಗೂ ಹೆಬ್ಬೆರಳುಗಳ ಆಕಾರ, ಗಾತ್ರದ ಮೇಲೆ ನಮ್ಮ ವ್ಯಕ್ತಿತ್ವ ಎಂಥದ್ದು ಎಂಬುದನ್ನು ತಿಳಿಯೋಣ. ಪಾದಗಳ ಆಕಾರವನ್ನು 4 ವಿಧಗಳಾಗಿ ವಿಂಗಡಿಸಲಾಗುತ್ತದೆ. ಈಜಿಪ್ಟಿನ ಪಾದದ ಆಕಾರ, ರೋಮನ್‌ ಪಾದದ ಆಕಾರ, ಗ್ರೀಕ್‌ ಪಾದದ ಆಕಾರ ಮತ್ತು ಚದರ ಅಡಿ ಆಕಾರ.

ನಿಮ್ಮ ಕಾಲಿನ ಹೆಬ್ಬೆರಳು ದೊಡ್ಡದಾಗಿದ್ದು, ಉಳಿದ 4 ಬೆರಳುಗಳು 45 ಡಿಗ್ರಿ ಕೋನದಲ್ಲಿ ಒರೆಯಾಗಿದ್ದರೆ ಇದನ್ನು ಈಜಿಪ್ಟಿಯನ್‌ ಫೂಟ್‌ ಶೇಪ್‌ ಎಂದು ಕರೆಯಲಾಗುತ್ತದೆ. ಈ ರೀತಿಯ ಪಾದದ ಆಕಾರ ಹೊಂದಿರುವವರು ರಾಜಮನೆತನದವರಂತೆ ಬದುಕಲು ಇಷ್ಟಪಡುತ್ತಾರೆ. ನೀವು ಕಾಳಜಿಯನ್ನು ಇಷ್ಟಪಡುತ್ತೀರಿ. ಎಲ್ಲರೂ ನಿಮ್ಮನ್ನು ...