ಭಾರತ, ಏಪ್ರಿಲ್ 30 -- ಮಂಗಳೂರು: ಕಳೆದ ವರ್ಷಕ್ಕೆ ಹೋಲಿಸಿದರೆ, ಜಾಯಿಕಾಯಿ ದರವು ಒಂದು ಕೆಜಿಗೆ 100 ರೂಪಾಯಿ ಹಾಗೂ ಜಾಯಿಪತ್ರಿ ದರ ಸುಮಾರು 300 ರೂಪಾಯಿ ವರೆಗೆ ಕುಸಿತ ಕಂಡಿದೆ. ಸಾಮಾನ್ಯವಾಗಿ ಏರುಗತಿಯಲ್ಲಿರುವ ಜಾಯಿಕಾಯಿ ಬೆಳೆಯ ಧಾರಣೆ ಕುಸಿತ ಕಂಡಿರುವುದು ಬೆಳೆಗಾರರಲ್ಲಿ ಆತಂಕ ಕಾಡಿದೆ. ಜಾಯಿಕಾಯಿ ಪ್ರಮುಖ ಸಂಬಾರ ಪದಾರ್ಥ. ಕರ್ನಾಟಕದ ಕರಾವಳಿ ಹಾಗೂ ಮಲೆನಾಡಿನ ಕೆಲವೆಡೆ ಅಡಕೆ ತೋಟದಲ್ಲಿ ಗಿಡಗಳ ಮಧ್ಯೆ ಇದನ್ನು ಬೆಳೆಯುತ್ತಾರೆ. ಆರೋಗ್ಯ, ಸೌಂದರ್ಯವರ್ಧಕವಾಗಿಯೂ ಉಪಯೋಗವಾಗುವ ಜಾಯಿಕಾಯಿ ಕೃಷಿ ಸುಲಭವಾದದ್ದು. ಆದರೂ ಇದರ ಆಕರ್ಷಣೆ ಕರ್ನಾಟಕಕ್ಕಿಂತ ಜಾಸ್ತಿ ಕೇರಳದಲ್ಲಿದೆ. ಹೀಗಾಗಿ ಕೇರಳ ದೇಶದಲ್ಲಿ ಅತಿ ಹೆಚ್ಚು ಜಾಯಿಕಾಯಿ ಬೆಳೆಯುವ ರಾಜ್ಯವಾಗಿ ಗುರುತಿಸಲ್ಪಡುತ್ತಿದೆ.

ಸಾಮಾನ್ಯವಾಗಿ ಮೇ ತಿಂಗಳಿಂದ ಜುಲೈವರೆಗೆ ಜಾಯಿಕಾಯಿ ಕೊಯಿಲು ನಡೆಯುತ್ತದೆ. ಕೇರಳದಲ್ಲಿ ಹೆಚ್ಚಿನ ಸಂಖ್ಯೆ ರೈತರು ಇದನ್ನು ಬೆಳೆಯುತ್ತಾರೆ. ಕಳೆದ ವರ್ಷ ಜಾಯಿಪತ್ರಿ ಕೆಜಿಯೊಂದಕ್ಕೆ 1500ರಿಂದ 2 ಸಾವಿರ ರೂವರೆಗೆ ಇತ್ತು. ಈಗ 1300ರಿಂದ 1700ವರೆಗ...