Hubli, ಏಪ್ರಿಲ್ 25 -- ಹುಬ್ಬಳ್ಳಿ: ನೇಹಾ ಹಿರೇಮಠ್ ಕೊಲೆ ಅತ್ಯಂತ ದುರದೃಷ್ಟಕರ ಘಟನೆ.ತ್ವರಿತ ವಿಚಾರಣೆಗಾಗಿ ಸಿಒಡಿ ಗೆ ಪ್ರಕರಣವನ್ನು ವಹಿಸಲಾಗಿದೆ. ಜೊತೆಗೆ ವಿಶೇಷ ನ್ಯಾಯಾಲಯ ಸ್ಥಾಪಿಸಿ. ಪ್ರತ್ಯೇಕ ವಿಚಾರಣೆ ಮಾಡಿ ಕೊಲೆ ಆರೋಪಿಗೆ ಆದಷ್ಟು ಕಠಿಣ ಶಿಕ್ಷೆ ಕೊಡಿಸಲು ಸರ್ಕಾರ ಪ್ರಯತ್ನ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಹುಬ್ಬಳ್ಳಿಯಲ್ಲಿ ಕೊಲೆಯದ ನೇಹಾ ಹಿರೇಮಠ್ ಅವರ ಮನೆಗೆ ಗುರುವಾರ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಫಯಾಜ್ ಗೆ ಕುಮ್ಮಕ್ಕು ಕೊಟ್ಟವರ ಬಂಧನವಾಗಬೇಕು ಹಾಗೂ ಕುಟುಂಬದವರಿಗೆ ಜೀವ ಬೆದರಿಕೆ ಇರುವುದರಿಂದ ರಕ್ಷಣೆ ನೀಡಬೇಕೆಂಬ ಕುಟುಂಬದವರ ಬೇಡಿಕೆ ಇರುವ ಬಗ್ಗೆ ಮಾತನಾಡಿ ಅಗತ್ಯ ಬಿದ್ದರೆ ರಕ್ಷಣೆ ಕೊಡುತ್ತೇವೆ. ಎಲ್ಲಾ ದೃಷ್ಟಿಯಿಂದಲೂ ತನಿಖೆ ಕೈಗೊಳ್ಳುವಂತೆ ತಿಳಿಸಿದ್ದೇನೆ ಎಂದು ಸಿದ್ದರಾಮಯ್ಯ ಅಭಯ ನೀಡಿದರು.

ಬಿಜೆಪಿಯವರು ಸಿಬಿಐ ಗೆ ಪ್ರಕರಣ ವಹಿಸಲು ಆಗ್ರಹಿಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಬಿಜೆಪಿ ಪ್ರಕರಣದ...