ಭಾರತ, ಮೇ 4 -- ಬೆಂಗಳೂರು: ಚಿನ್ನದ ದರವನ್ನು ನಿರೀಕ್ಷೆ ಮಾಡುವುದು ಅಸಾಧ್ಯ. ಒಂದು ದಿನ ಕಡಿಮೆಯಾದ್ರೆ ಮರುದಿನವೇ ಏರಿಕೆಯಾಗಬಹುದು. ಇಲ್ಲಾಂದ್ರೆ ಒಂದು ವಾರಗಳ ಕಾಲ ನಿರಂತರ ಇಳಿಕೆಯೂ ಕಾಣಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ಪ್ರತಿದಿನ ಚಿನ್ನ, ಬೆಳ್ಳಿ ದರದಲ್ಲಿ ಏರಿಳಿತವಾಗುತ್ತಿದೆ. ನಿನ್ನೆ ಏರಿಕೆಯಾಗಿದ್ದ ಹಳದಿ ಲೋಹದ ಬೆಲೆ ಇಂದು ಇಳಿಕೆಯಾಗಿದೆ. ಆದರೆ ಬೆಳ್ಳಿ ದರ ಕೆಜಿ ಮೇಲೆ 250 ರೂ ಹೆಚ್ಚಾಗಿದೆ. ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಇಂದು ಚಿನ್ನದ ದರ ಎಷ್ಟಿದೆ ಗಮನಿಸಿ.

ಇಂದು 1 ಗ್ರಾಂ ಚಿನ್ನಕ್ಕೆ 6,575 ರೂ. ಇದೆ. ನಿನ್ನೆ 6,625 ರೂ ಇದ್ದು, ಈ ದರಕ್ಕೆ ಹೋಲಿಸಿದರೆ 50 ರೂ ಇಳಿಕೆಯಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 52,600 ರೂ. ನೀಡಬೇಕು. ನಿನ್ನೆ 53,000 ರೂ ಇದ್ದು, ನಿನ್ನೆ ದರಕ್ಕೆ ಹೋಲಿಸಿದರೆ ಇಂದು 400 ರೂ. ಇಳಿಕೆಯಾಗಿದೆ. 10 ಗ್ರಾಂ ಚಿನ್ನಕ್ಕೆ 65,750 ರೂ ಇದೆ. ನಿನ್ನೆ 66,250 ರೂ. ಇತ್ತು. ಈ ದರಕ್ಕೆ ಹೋಲಿಸಿದರೆ 500 ರೂ. ಕಡಿಮೆಯಾಗಿದೆ. 100 ಗ್ರಾಂ ಚಿನ್ನ ಖರೀದ...