Seol, ಏಪ್ರಿಲ್ 25 -- ಸಿಯೋಲ್‌: ಈಗ ಎಲ್ಲೆಲ್ಲೂ ಡಿ ಫೇಕ್‌ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಅದರಲ್ಲೂ ಕೃತಕ ಬುದ್ದಿ ಮತ್ತೆ ತಂತ್ರಜ್ಞಾನ ಎಷ್ಟು ಒಳಿತನ್ನು ಮಾಡುತ್ತಿದೆಯೋ ಅಷ್ಟೇ ಮೋಸ, ವಂಚನೆಯೂ ದಾರಿಯಾಗಿದೆ. ಬಳಕೆ ಮಾಡುವವರು ಎಚ್ಚರದಿಂದ ಇರಬೇಕಷ್ಟೇ. ಭಾರತದಲ್ಲಿಯೇ ಇತ್ತೀಚಿಗೆ ನಟಿ ರಶ್ಮಿಕಾ ಮಂದಣ್ಣ ಸಹಿತ ಹಲವರ ಡಿಫೇಕ್‌ ವಿಡಿಯೋ ಬಳಸಿ ಭಾರೀ ಸದ್ದು ಮಾಡಿದ್ದ ಪ್ರಕರಣ ವರದಿಯಾಗಿತ್ತು. ಗಣ್ಯರನ್ನೇ ಟಾರ್ಗೆಟ್‌ ಮಾಡಿ ಡಿಫೇಕ್‌ ವಿಡಿಯೋ ಮಾಡುವುದು ನಡೆದಿದೆ. ಇದೇ ರೀತಿ ವಿಶ್ವದ ಪ್ರಮುಖ ಉದ್ಯಮಗಳಲ್ಲಿ ಒಬ್ಬರಾದ ಎಲಾನ್‌ ಮಸ್ಕ್‌ ಅವರ ಡಿಫೇಕ್‌ ವಿಡಿಯೋ ಮೂಲಕ ಭಾರೀ ವಂಚನೆ ಮಾಡಿರುವ ಪ್ರಕರಣವಿದು.

ದಕ್ಷಿಣಾಕೋರಿಯಾದ ಸಿಯೋಲ್‌ ನಗರದ ಮಹಿಳೆಯರೊಬ್ಬರು ತಾವು ಎಕ್ಸ್‌ ಸಂಸ್ಥೆ ಹಾಗೂ ಟೆಸ್ಲಾ ಕಂಪೆನಿ ಮುಖ್ಯಸ್ಥ ಎಲಾನ್‌ ಮಸ್ಕ್‌ ಅವರೊಂದಿಗೆ ಸಂಪರ್ಕಕ್ಕೆ ಬಂದಿರುವಾಗಿ ನಂಬಿ ಸಾಕಷ್ಟು ಹಣವನ್ನೂ ಕಳೆದುಕೊಂಡಿದ್ದಾಳೆ.

ಇದನ್ನೂ ಓದಿರಿ: ರಣನೀತಿ: ಬಾಲಾಕೋಟ್‌ ಆಂಡ್‌ ಬಿಯಾಂಡ್ ಶೂಟಿಂಗ್‌ ಅನುಭವ ರೋಚಕವೆಂದ ಆಶಿಶ್‌ ವ...