ಭಾರತ, ಮೇ 4 -- ಬೆಂಗಳೂರು: ಹಿರಿಯ ನಾಗರಿಕರ ಮನೆಯಲ್ಲಿ ಮನೆ ಕೆಲಸ ಮಾಡಿಕೊಂಡಿದ್ದ ಮಹಿಳೆಯೊಬ್ಬರು 34 ಲಕ್ಷ ರೂಪಾಯಿ ಮೌಲ್ಯದ ವಜ್ರ, ಚಿನ್ನ ಮತ್ತು ಬೆಳ್ಳಿಯ ಆಭರಣಗಳು ಹಾಗೂ 11 ಲಕ್ಷ ರೂಪಾಯಿ ನಗದು ದೋಚಿರುವ ಘಟನೆ ಬೆಂಗಳೂರಿನ ಜೆ.ಪಿ. ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.

ಜೆ.ಪಿ.ನಗರ 1ನೇ ಹಂತದ ಅಪಾರ್ಟ್‌ಮೆಂಟ್‌ವೊಂದರ ಮನೆಯಲ್ಲಿ ಮಹಿಳೆಯೊಬ್ಬರು ಸುಮಾರು 8 ವರ್ಷಗಳಿಂದ ಮನೆಗೆಲಸ ಮಾಡಿಕೊಂಡಿದ್ದಳು. ಮನೆಯ ಮಾಲೀಕರಾದ ಪತಿ ಮತ್ತು ಪತ್ನಿ ಇಬ್ಬರೂ ಪಿನ್ಯಾದಿ ಹಿರಿಯ ನಾಗರೀಕರಾಗಿದ್ದು, ಅವರ ಇಬ್ಬರು ಮಕ್ಕಳು ವಿದೇಶದಲ್ಲಿರುತ್ತಾರೆ.

ಕೆಲಸದಾಕೆ ಮನೆಯಲ್ಲಿರುವ ಚಿನ್ನದ ಆಭರಣಗಳನ್ನು ಆಗಿಂದಾಗ್ಗೆ ಒಂದೊಂದೇ ಅಭರಣವನ್ನು ಮನೆಯ ಮಾಲೀಕರಿಗೆ ತಿಳಿಯದಂತೆ ಕಳವು ಮಾಡುತ್ತಿರುತ್ತಾಳೆ.

ಇತ್ತೀಚೆಗೆ ಇವರ ಮೊಮ್ಮಗನ ನಾಮಕರಣ ಕಾರ್ಯಕ್ರಮ ನಡೆದಿರುತ್ತದೆ. ಸಮಾರಂಭ ಮುಗಿದ ನಂತರ ಎಲ್ಲ ವಜ್ರ, ಚಿನ್ನ ಮತ್ತು ಬೆಳ್ಳಿಯ ಆಭರಣಗಳು ಹಾಗೂ ನಗದು ಹಣವನ್ನು ಲೆಕ್ಕ ಹಾಕಿ ಆಫೀಸ್ ರೂಮ್‌ನಲ್ಲಿರುವ ಬೀರುವಿನಲ್ಲಿ ಇಟ್ಟಿರುತ್ತಾರೆ....