ಭಾರತ, ಏಪ್ರಿಲ್ 23 -- ಇತ್ತೀಚಿನ ದಿನಗಳಲ್ಲಿ ಯಾರು ಯಾವ ವಿಚಾರಕ್ಕೆ ಟ್ರೋಲ್‌ ಆಗುತ್ತಾರೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಇದಕ್ಕೆ ಸಾಕ್ಷಿ ಉತ್ತರಪ್ರದೇಶದ ಪ್ರಾಚಿ ನಿಗಮ್‌. ಪ್ರಾಚಿ 10ನೇ ತರಗತಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿದ ಪ್ರತಿಭಾವಂತ ಹುಡುಗಿ. ಶೇ 98.5 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದರು. ಆದರೆ ಆಕೆ ತನ್ನ ಸಾಧನೆಗಿಂತ ಟ್ರೋಲ್‌ ಮೂಲಕವೇ ಹೆಚ್ಚು ಸುದ್ದಿಯಾದರು. ಅದಕ್ಕೆ ಕಾರಣ ಆಕೆಯ ಮುಖದ ಮೇಲೆ ಗಡ್ಡ-ಮೀಸೆಯಂತೆ ಕೂದಲು ಬೆಳೆದಿರುವುದು. ಈ ಕಾರಣದಿಂದ ಆ ಹುಡುಗಿಯ ಫೋಟೊ ವೈರಲ್‌ ಆಗಿ, ಆಕೆ ಮಾಡಿರುವ ಸಾಧನೆ ಕೂಡ ಟ್ರೋಲ್‌ನಲ್ಲಿ ಮುಚ್ಚಿ ಹೋಗುವಂತಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆದ ಆಕೆಯ ಫೋಟೊ ಆಕೆಯ ಸಾಧನೆಯನ್ನು ಜನ ಗುರುತಿಸಿದೇ ಮುಖದ ಮೇಲಿನ ಕೂದಲು ಗುರುತಿಸುವಂತೆ ಮಾಡಿದೆ.

ಆದರೆ ಪ್ರಾಚಿಯನ್ನು ಟ್ರೋಲ್‌ ಮಾಡಿರುವುದರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರಿ ಖಂಡನೆ ವ್ಯಕ್ತವಾಗಿದ್ದು, ಹಲವರು ಪ್ರಾಚಿಗೆ ಸಪೂರ್ಟ್‌ ಮಾಡಿದ್ದಾರೆ. ಹದಿವಯಸ್ಸಿನಲ್ಲಿ...