ಭಾರತ, ಮೇ 4 -- ಬೆಂಗಳೂರು: ಕರ್ನಾಟಕದಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ಪ್ರಕರಣಗಳು ಎಷ್ಟಿರಬಹುದು? ಸಾವಿರ ಲಕ್ಷ, ಕೋಟಿ ಊಹೂಂ, 3.25 ಕೋಟಿ ಹಳೆಯ ಪ್ರಕರಣಗಳಿವೆ. ಈ ಪ್ರಕರಣಗಳು ಇದುವರೆಗೂ ಇತ್ಯರ್ಥವಾಗಿಲ್ಲ. ಕಳೆದ ವರ್ಷ ಗೃಹ ಇಲಾಖೆ ದಂಡದಲ್ಲಿ ರಿಯಾಯಿತಿ ತೋರಿಸಿ ದಂಡ ಪಾವತಿಸಲು ಸಮಯಾವಕಾಶ ನೀಡಿದ್ದರೂ ಕೋಟಿ ಕೋಟಿ ಪ್ರಕರಣಗಳು ಬಾಕಿ ಇರುವುದು ಅಚ್ಚರಿ ಮೂಡಿಸಿದೆ.

ವಾಹನ ಮಾಲೀಕರು ದಂಡ ಪಾವತಿಸಿ ಪ್ರಕರಣ ಮುಕ್ತರಾಗುವ ಮನಸ್ಸು ಮಾಡುತ್ತಿಲ್ಲ. ರಾಜ್ಯದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಸಂಚಾರಿ ನಿಯಮಗಳು ಉಲ್ಲಂಘನೆಯಾಗಿದ್ದರೆ ಬೆಂಗಳೂರಿನಲ್ಲಿ ಎಷ್ಟು ಪ್ರಕರಣಗಳಿರಬಹುದು ಎಂಬ ಪ್ರಶ್ನೆ ಮೂಡುವುದು ಸಹಜ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 2.68 ಕೋಟಿ ಪ್ರಕರಣಗಳು ಇತ್ಯರ್ಥಕ್ಕಾಗಿ ಕಾಯುತ್ತಿವೆ. ಇಡೀ ರಾಜ್ಯದಲ್ಲಿ 3.25 ಕೋಟಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ 1,700 ಕೋಟಿ ಹಣ ಪಾವತಿಯಾಗಬೇಕಿದ್ದರೆ ಬೆಂಗಳೂರಿನಲ್ಲಿ 1,425 ಕೋಟಿ ರೂ. ಪಾವತಿಯಾಗಬೇಕಿದೆ.

ಅಂಕಿಅಂಶಗಳ ಪ್ರಕಾರ ರಿಯಾಯಿತಿ ನೀಡಿದಾಗ ನಿಯಮ ಉಲ್ಲಂಘಿಸಿದವ...