ಭಾರತ, ಮೇ 2 -- ಬೇಸಿಗೆ ಕಾಲ ಬಂತೆಂದರೆ ಸಾಕು ಸುಡುವ ಬಿಸಿಲು, ತಾಪಮಾನದ ನಡುವೆಯೂ ಖುಷಿ ಪಡುವ ವಿಚಾರವೊಂದಂತೂ ಇದ್ದೇ ಇದೆ. ಅದುವೇ ಮಾವಿನ ಹಣ್ಣಿನ ಸೀಸನ್‌ ಬಂದೇ ಬಿಟ್ಟಿದೆ ಎನ್ನುವುದು. ಹೌದು, ಎಪ್ರಿಲ್‌-ಮೇ ತಿಂಗಳಿನಲ್ಲಿ ಮಾರುಕಟ್ಟೆಯಲ್ಲಿ ಬಗೆ ಬಗೆಯ ಮಾವಿನ ಹಣ್ಣುಗಳದ್ದೇ ಕಾರುಬಾರು. ಆದರೆ ಮಾವು ಪ್ರಿಯರಿಗೆ ಈ ಬಾರಿ ಮಾರುಕಟ್ಟೆಯಲ್ಲಿ ಯಾವೆಲ್ಲಾ ವಿಧದ ಮಾವಿನ ಹಣ್ಣುಗಳು ಲಭ್ಯವಿದೆ? ಆ ಮಾವಿನ ಹಣ್ಣುಗಳ ವಿಶೇಷತೆಗಳೇನು ಎಂಬುದರ ಮಾಹಿತಿ ನಿಮಗಾಗಿ.

ಮಾವಿನ ಹಣ್ಣಿನ ರಾಜ ಎಂದು ಕರೆಯಲ್ಪಡುವ ಅಲ್ಫೋನ್ಸೋ, ನಾರುರಹಿತವಾಗಿದ್ದು ಬಹಳ ಸಿಹಿ ಮತ್ತು ರುಚಿಕರ ತಿರುಳಿನಿಂದಾಗಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಇದರಲ್ಲಿ ವಿಟಮಿನ್ 'ಎ' ಹಾಗೂ 'ಸಿ' ಅಂಶ ಹೇರಳವಾಗಿದ್ದು, ಬಂಗಾರದ ಹಳದಿ ಬಣ್ಣ ಹೊಂದಿರುತ್ತವೆ. ಹೆಚ್ಚು ದಿನಗಳವರೆಗೆ ಉಳಿಯುವ ಈ ಮಾವಿನ ತಳಿಯು ರಫ್ತಿಗೆ ಸೂಕ್ತವಾಗಿದೆ.

ಈ ಹಣ್ಣು ಆಕಾರದಲ್ಲಿ ದೊಡ್ಡದಾಗಿದ್ದು, ಹೆಚ್ಚಾಗಿ ಉಪ್ಪಿನಕಾಯಿ, ಚಟ್ನಿ ಸೇರಿದಂತೆ ಅಡುಗೆಯಲ್ಲಿ ಬಳಕೆ ಮಾಡಲಾಗುತ್ತದೆ. ವಿಶಿಷ್ಟ ಪ...