ಭಾರತ, ಏಪ್ರಿಲ್ 30 -- ಮಕ್ಕಳನ್ನು ಬೆಳೆಸುವುದು ಸುಲಭವಲ್ಲ. ಮಕ್ಕಳನ್ನು ಸರಿಯಾಗಿ ಸಾಕಬೇಕು ಎನ್ನುವ ಕಾರಣಕ್ಕೆ ಕೆಲಸ ಬಿಟ್ಟ ಎಷ್ಟೋ ಜನರನ್ನು ನಾವು ನೋಡಿದ್ದೇವೆ. ಆದರೆ ಮಕ್ಕಳನ್ನು ಚೆನ್ನಾಗಿ ಬೆಳೆಸುವ ಧಾವಂತದಲ್ಲಿ ಪೋಷಕರು ಎರಡು ಮುಖ್ಯ ತಪ್ಪುಗಳನ್ನು ಮಾಡುತ್ತಾರೆ. ಮಕ್ಕಳನ್ನು ಅತಿಯಾಗಿ ಮುದ್ದಿಸುವುದೂ ತಪ್ಪು, ಅತಿಯಾಗಿ ಶಿಕ್ಷಿಸುವುದೂ ತಪ್ಪು. ಮಕ್ಕಳನ್ನು ಬೆಳೆಸುವುದರಲ್ಲಿ ಒಂದು ಹದ ಇರಬೇಕು ಎಂದು ಹಿರಿಯರು ಹೇಳುವುದನ್ನು ಕೇಳಿರುತ್ತೇವೆ. ಮಕ್ಕಳನ್ನು ಬೆಳೆಸುವ 4 ಮುಖ್ಯ ವಿಧಾನಗಳನ್ನು ಮನಃಶಾಸ್ತ್ರರು ಗುರುತಿಸಿದ್ದಾರೆ. ಪ್ರತಿ ವಿಧಾನದಲ್ಲಿಯೂ ಸಂವಹನ, ಶಿಸ್ತು, ಪೋಷಣೆ ಮತ್ತು ಮಕ್ಕಳಿಂದ ನಿರೀಕ್ಷೆ ಪ್ರತ್ಯೇಕವಾಗಿಯೇ ಇರುತ್ತದೆ. ಇಲ್ಲಿರುವ ಎಲ್ಲ 4 ವಿಧಾನಗಳನ್ನು ನೀವು ಸಾವಧಾನವಾಗಿ ಓದಿಕೊಳ್ಳಿ. ನಿಮ್ಮ ಶೈಲಿ ಯಾವುದು? ನಿಮ್ಮ ಮಕ್ಕಳ ಸ್ವಭಾವಕ್ಕೆ ಯಾವ ರೀತಿಯ ಪೇರೆಂಟಿಂಗ್ ಸೂಕ್ತ ಎನ್ನುವುದನ್ನು ಕಂಡುಕೊಳ್ಳಲು ನೆರವಾಗಬಹುದು.

ಮಕ್ಕಳನ್ನು ಬೆಳೆಸಲು ಈ ಶೈಲಿ ಅನುಸರಿಸುವ ಪೋಷಕರು ಕಟ್ಟುನಿಟ್ಟಾದ, ಶಿಸ್ತು, ...