ಭಾರತ, ಮೇ 3 -- ನಮ್ಮ ದೇಶ ಮಾವಿನ ನಾಡು ಎಂಬ ಖ್ಯಾತಿ ಗಳಿಸಿದೆ. ಹಣ್ಣುಗಳ ರಾಜ ಎಂದು ಕರೆಯಲ್ಪಡುವ ರಸಭರಿತ ಮಾವಿನಹಣ್ಣಿನ ಸುಮಾರು 1500 ಪ್ರಬೇಧಗಳು ಭಾರತದಲ್ಲಿವೆ. ಪ್ರತಿಯೊಂದು ಪ್ರಬೇಧವೂ ವಿಭಿನ್ನ ರುಚಿ, ಆಕಾರ ಮತ್ತು ಬಣ್ಣವನ್ನು ಹೊಂದಿರುತ್ತದೆ. ಗುಲಾಬಿ-ಕೆಂಪು, ಗುಲಾಬ್ ಖಾಸ್ ಅಥವಾ ಸಿಂಧೂರದಿಂದ ಗಿಳಿ ಕೊಕ್ಕಿನ ಆಕಾರದ ತೋತಾಪುರಿ, ರಸಪೂರಿ, ಅಲ್ಫೋನ್ಸೋ ಸೇರಿದಂತೆ ವಿಶಿಷ್ಟ ಮಾವಿನ ತಳಿಗಳು ಭಾರತೀಯ ಮಾರುಕಟ್ಟೆಗಳನ್ನು ಆಳುತ್ತಿವೆ. ಏಪ್ರಿಲ್ ಮಧ್ಯಭಾಗದಿಂದ ಆಗಸ್ಟ್‌ವರೆಗೆ ಮಾರುಕಟ್ಟೆಗಳಲ್ಲಿ ಮಾವಿನ ಹಣ್ಣುಗಳದ್ದೇ ದರ್ಬಾರ್.

ಆದರೆ ಭಾರತದ ಯಾವ ರಾಜ್ಯಗಳಲ್ಲಿ ಯಾವ್ಯಾವ ಮಾವಿನ ತಳಿಗಳನ್ನು ಬೆಳೆಯುತ್ತಾರೆ? ಅದರ ವಿಶೇಷತೆಗಳೇನು ಎಂಬುದರ ಮಾಹಿತಿ ಇಲ್ಲಿದೆ.

ಪೋರ್ಚುಗೀಸ್ ಜನರಲ್ ಮತ್ತು ಮಿಲಿಟರಿ ಪರಿಣತರಾದ ಅಫೊನ್ಸೊ ಡಿ ಅಲ್ಬುಕರ್ಕ ರ ನಂತರ ಈ ತಳಿಯ ಮಾವಿನ ಹಣ್ಣುಗಳಿಗೆ ಅಲ್ಫೋನ್ಸೋ ಎಂದು ಹೆಸರಿಡಲಾಯಿತು. ಮಹಾರಾಷ್ಟ್ರದ ದೇವಗಡ, ಸಿಂಧುದುರ್ಗ, ರಾಯಗಡ ಮತ್ತು ರತ್ನಗಿರಿ ಜಿಲ್ಲೆಗಳು ಸೇರಿದಂತೆ ಭಾರತದ ಪಶ್ಚಿಮ ಭ...