ಭಾರತ, ಏಪ್ರಿಲ್ 30 -- ಬಹುತೇಕರಿಗೆ ಈ ಬೇಸಿಗೆ ಕಾಲ ಯಾವಾಗ ಮುಗಿಯುತ್ತೋ ಎಂದೆನಿಸಿರಬಹುದು. ಯಾಕೆಂದರೆ ದಾಹ ತೀರಿಸಲು ನೀರು ಕುಡಿದು ಹೊಟ್ಟೆ ತುಂಬಿದಂತಾಗಿರುತ್ತದೆ. ಮಧ್ಯಾಹ್ನ ಆದ್ರೆ ಅಯ್ಯೋ, ಬಿಸಿಬಿಸಿ ಅನ್ನ-ಸಾಂಬಾರ್ ಯಾರು ಊಟ ಮಾಡುತ್ತಾರೆ ಎಂದೆನಿಸುತ್ತದೆ. ಈ ಬಿಸಿಲಿನ ತಾಪಮಾನಕ್ಕೆ ಅನ್ನ-ಸಾಂಬಾರ್ ಊಟ ಮಾಡಿ ಹಲವರಿಗೆ ಬೋರ್ ಬಂದಿರಬಹುದು. ಬಹುತೇಕ ಮಂದಿ ಲಘು ಆಹಾರದತ್ತ ಮೊರೆ ಹೋಗುತ್ತಿದ್ದಾರೆ. ಲಘು ಭೋಜನಕ್ಕೆ ನೀವು ಪೋಹಾ ಅಥವಾ ಅವಲಕ್ಕಿಯನ್ನು ನೀವು ಆಯ್ಕೆ ಮಾಡಬಹುದು. ಇದು ದೇಹವನ್ನು ತಂಪಾಗಿರಿಸಲು ಸಹಾಯ ಮಾಡುತ್ತದೆ.

ಚಪ್ಪಟೆ ಅಕ್ಕಿಯಂತಿರುವ ದಪ್ಪ ಅವಲಕ್ಕಿಯಿಂದ ವಿವಿಧ ಭಕ್ಷ್ಯಗಳನ್ನು ನೀವು ತಯಾರಿಸಬಹುದು. ಬೆಳಗಿನ ಉಪಾಹಾರಕ್ಕಾಗಿ ಇದನ್ನು ಸೇವಿಸಿದರೂ, ನಿಮ್ಮ ಊಟದ ಮೆನುವಿನಲ್ಲಿ ಅವಲಕ್ಕಿಯನ್ನು ಸೇರಿಸಿದರೆ ತಪ್ಪೇನಿಲ್ಲ. ಅವಲಕ್ಕಿಯು ಕಡಿಮೆ ಕ್ಯಾಲರಿಗಳು ಮತ್ತು ಹೆಚ್ಚಿನ ಕಾರ್ಬೋಹೈಡ್ರೇಟ್ ಅಂಶವನ್ನು ಹೊಂದಿದೆ. ಅಗತ್ಯವಾದ ಪೋಷಕಾಂಶಗಳಿಂದ ತುಂಬಿರುವ ಈ ಅವಲಕ್ಕಿ ಭಕ್ಷ್ಯ ತಯಾರಿಸಲು ಹೆಚ್ಚು ಸಮಯ ತೆಗೆದ...