Bengaluru,ಬೆಂಗಳೂರು, ಮೇ 4 -- ಬೆಂಗಳೂರು: ಬ್ಯೂಟಿಷಿಯನ್ ಒಬ್ಬರನ್ನು ಮನೆಗೆ ಕರೆಯಿಸಿ ಮೇಕಪ್ ಮಾಡುವಾಗ ಆಕೆಯ ಪರ್ಸಿನಲ್ಲಿದ್ದ ಮನೆಯ ಬೀಗದ ಕೈಯನ್ನು ಕಳುವು ಮಾಡಿ ನಕಲಿ ಕೀ ಮಾಡಿಸಿಕೊಂಡು ಕಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನು ಕೆಂಪೇಗೌಡನಗರ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇತ್ತೀಚೆಗೆ ಬ್ಯೂಟಿಷಿಯನ್ ಮತ್ತು ಆಕೆಯ ತಾಯಿ ಮನೆಯಿಂದ ಹೊರಗೆ ಹೋಗಿದ್ದ ವೇಳೆ ಕಳ್ಳತನ ನಡೆದಿರುವುದು ಕಂಡು ಬರುತ್ತದೆ. ಆದರೆ ಮನೆಯ ಮುಂಬಾಗಿಲು ಹಾಕಿದ ರೀತಿಯಲ್ಲೇ ಇದ್ದದ್ದು ಅನೇಕ ಸಂದೇಹಗಳಿಗೆ ಕಾರಣವಾಗಿತ್ತು.

ಈ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಾರೆ. ಅಪ್ಪುರಾವ್‌ ಮುಖ್ಯರಸ್ತೆಯಲ್ಲಿ ಹೇರ್ ಡ್ರೆಸಿಂಗ್ ಅಂಗಡಿಯ ಮುಂಭಾಗದಲ್ಲಿ ನಿಂತಿದ್ದ ಮೂವರು ಅರೋಪಿಗಳನ್ನು ಬಂಧಿಸಿದ್ದಾರೆ. ಅರೋಪಿಗಳಿಂದ 2 ಜೊತೆ ಚಿನ್ನದ ಓಲೆ, ಒಂದು ಚಿನ್ನದ ಚೈನ್, 3,70,000 ನಗದು ಹಣ ಸೇರಿ 7,70,000 ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ವಶ ಪಡಿಸಿಕೊಂಡಿದ್ದಾರೆ.

ಹಲವು ದಿನಗಳ ಮುಂಚೆಯೇ ಪಿತೂರಿ ...