Bengaluru,ಬೆಂಗಳೂರು, ಮೇ 4 -- ಬೆಂಗಳೂರು: ಕರ್ನಾಟಕದಲ್ಲಿ ಬಿಸಿಲ ಝಳಕ್ಕೆ ರಾಯಚೂರಿನಲ್ಲಿ ಆರು ಜನ ಸಾವನ್ನಪ್ಪಿದ್ದು, ಉಡುಪಿಯಲ್ಲಿ ಸೆಕೆ ಎಂದು ಟೆರೇಸ್‌ನಲ್ಲಿ ಮಲಗಿದ್ದ ಶಿಕ್ಷಕರೊಬ್ಬರು ಅಲ್ಲಿಂದ ಕೆಳಕ್ಕೆ ಬಿದ್ದು ಮೃತ ಪಟ್ಟ ಘಟನೆ ವರದಿಯಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಶಾಖದ ಅಲೆ, ಬಿಸಿಲ ಝಳ ಈ ಸಲ ಸ್ವಲ್ಪ ಹೆಚ್ಚೇ ಇತ್ತು. ಮಾರ್ಚ್ 1 ರಿಂದ ಏಪ್ರಿಲ್ 3 ರ ಅವಧಿಯಲ್ಲಿ ಬಾಗಲಕೋಟೆ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ತಲಾ ಒಂದೊಂದು ಸಾವು ಸಂಭವಿಸಿತ್ತು. ರಾಜ್ಯದಲ್ಲಿ ಕಳೆದ ತಿಂಗಳು 500ಕ್ಕೂ ಹೆಚ್ಚು ಬಿಸಿಲಾಘಾತ (Heat Stroke) ಪ್ರಕರಣ ಸಂಭವಿಸಿದ್ದವು.

ಈ ತಿಂಗಳ ಆರಂಭದಲ್ಲೇ ಬಿಸಿಲ ಝಳಕ್ಕೆ ರಾಯಚೂರಿನಲ್ಲಿ ಒಂದೇ ದಿನ (ಮೇ 3) ಐವರು ಮೃತಪಟ್ಟಿದ್ದಾರೆ. ಇದಲ್ಲದೆ, ಮೊನ್ನೆ ಬಿಎಂಟಿಸಿ ನಿರ್ವಾಹಕರೊಬ್ಬರು ಮೃತಪಟ್ಟಿರುವ ವರದಿಯೂ ಬಂದಿದೆ. ಈ ನಡುವೆ, ಕಾರಿಗೆ ಬೆಂಕಿ ಹತ್ತಿಕೊಂಡ ಘಟನೆಯೂ ನಡೆದಿದೆ. ರಾಯಚೂರು ಜಿಲ್ಲೆಯಲ್ಲಿ ಬಿಸಿಲಿನ ಝಳ ತುಸು ಹೆಚ್ಚೇ ಇದೆ. ರಾಜ್ಯದ ಗರಿಷ್ಠ ತಾಪಮಾನ ದಾಖಲಾಗಿರುವುದು ಕೂಡ ಇದೇ ...