ಭಾರತ, ಏಪ್ರಿಲ್ 30 -- ಆರೋಗ್ಯಕರ ದೇಹಕ್ಕೆ ಪ್ರೊಟೀನ್ ಅವಶ್ಯಕ. ಸಾಮಾನ್ಯವಾಗಿ ದೇಹಕ್ಕೆ ಹೆಚ್ಚು ಪೋಷಕಾಂಶ ಬೇಕು ಎಂದಾಗ ಥಟ್ಟನೆ ನೆನಪಿಗೆ ಬರುವ ಆಹಾರವೆಂದರೆ ಮೊಟ್ಟೆ. ಎಲ್ಲರಿಗೂ ತಿಳಿದಿರುವಂತೆ ಮೊಟ್ಟೆಯಲ್ಲಿ ಹೆಚ್ಚು ಪೋಷಕಾಂಶಗಳಿವೆ. ಇದರ ಹೊರತಾಗಿ ಹಲವು ಸಸ್ಯಾಹಾರ ಹಾಗೂ ಮಾಂಸಾಹಾರಗಳಲ್ಲೂ ಹೇರಳವಾದ ಪ್ರೊಟೀನ್‌ಗಳಿವೆ. ಪ್ರಾಣಿ ಆಧಾರಿತ ಪ್ರೊಟೀನ್ ಹಾಗೂ ಸಸ್ಯಾಧಾರಿತ ಪ್ರೊಟೀನ್ ಕುರಿತು ಆಗಾಗ ಚರ್ಚೆಗಳು ನಡೆಯುತ್ತಿರುತ್ತವೆ. ದೇಹಕ್ಕೆ ಯಾವುದು ಹೆಚ್ಚು ಉತ್ತಮ ಎಂಬ ವಾದಗಳು ಇನ್ನೂ ಚಾಲ್ತಿಯಲ್ಲಿದೆ. ಹಾಗಿದ್ದರೆ ಪ್ರಾಣಿ ಆಧಾರಿತ ಮತ್ತು ಸಸ್ಯ ಆಧಾರಿತ ಪ್ರೊಟೀನ್‌ಗಳಲ್ಲಿರುವ ವ್ಯತ್ಯಾಸಗಳೇನು ಎಂಬುದನ್ನು ತಿಳಿಯೋಣ.

ಸಾಮಾನ್ಯವಾಗಿ ಪ್ರಾಣಿ ಆಧಾರಿತ ಅಥವಾ ಹೆಚ್ಚಿನ ಮಾಂಸಾಹಾರದಿಂದ ಸಿಗುವ ಪ್ರೊಟೀನ್‌ಗಳನ್ನು ಪೂರ್ಣಪ್ರಮಾಣದ ಪ್ರೊಟೀನ್‌ಗಳೆಂದೇ ಪರಿಗಣಿಸಲಾಗುತ್ತದೆ. ಏಕೆಂದರೆ ಇದರಲ್ಲಿ ಎಲ್ಲಾ ಅಗತ್ಯ ಅಮೈನೋ ಆಮ್ಲಗಳಿರುತ್ತದೆ. ಇದೇ ವೇಳೆ ಕೆಲವೊಂದು ಪ್ರೊಟೀನ್‌ ವಿಷಯಕ್ಕೆ ಬಂದಾಗ ಕೆಲವು ಸಸ್ಯ ಆಧಾರಿತ ಆಹಾರಗಳು ಅಪ...