ಭಾರತ, ಮೇ 3 -- ಬಹುತೇಕ ಮಂದಿ ವಾಕಿಂಗ್ ಮಾಡುವುದನ್ನು ನಿತ್ಯ ಜೀವನದ ಭಾಗವಾಗಿಸಿಕೊಂಡಿರುತ್ತಾರೆ. ಬೆಳಗ್ಗೆ ಅಥವಾ ಸಂಜೆಯ ಸಮಯವನ್ನು ಇದಕ್ಕಾಗಿ ಮೀಸಲಿಡುತ್ತಾರೆ. ಕೆಲವರು ಬೆಳಗ್ಗೆ ಬೇಗನೆ ಎದ್ದು ವಾಕಿಂಗ್ ಹೊರಟರೆ ಇನ್ನು ಕೆಲವರು ಮುಸ್ಸಂಜೆಯ ಹೊತ್ತಿಗೆ ಅಥವಾ ರಾತ್ರಿ ಊಟವಾದ ಬಳಿಕ ವಾಕ್ ಮಾಡಲು ಇಷ್ಟಪಡುತ್ತಾರೆ. ವಾಕಿಂಗ್ ಮಾಡುವುದರಿಂದ ಹೃದಯ ಆರೋಗ್ಯಕ್ಕೂ ಕೂಡ ಒಳ್ಳೆಯದು ಎಂಬುದು ತಜ್ಞರು ಅಭಿಪ್ರಾಯ. ಆದರೆ, ಕೆಲವರಿಗೆ ವಾಕಿಂಗ್ ಮಾಡುವಾಗ ತಮಗೆ ವೇಗವಾಗಿ ನಡೆಯಲು ಸಾಧ್ಯವಾಗುತ್ತಿಲ್ಲ. ನಡಿಗೆಯು ನಿಧಾನಗತಿಯಲ್ಲಿದೆ ಎಂಬ ಚಿಂತೆ ಕಾಡುತ್ತದೆ. ಹೀಗಾಗಿ ವೇಗವಾಗಿ ನಡೆಯುವುದು ಹೇಗೆ ಎಂಬುದರ ಕುರಿತು ಇಲ್ಲಿದೆ ಕೆಲವು ಸಲಹೆಗಳು.

ಅಧ್ಯಯನವೊಂದರ ಪ್ರಕಾರ, ಉತ್ತಮ ಫಿಟ್‌ನೆಸ್ ಮಟ್ಟವನ್ನು ಹೊಂದಿರುವ ವ್ಯಕ್ತಿಯ ಅಂದಾಜು ಮಧ್ಯಮ ವಾಕಿಂಗ್ ವೇಗವು ಪ್ರತಿ ಮೈಲಿಗೆ 15 ನಿಮಿಷಗಳು ಅಥವಾ ಪ್ರತಿ ಕಿಲೋಮೀಟರಿಗೆ 9 ನಿಮಿಷಗಳಾಗಿವೆ. ಒಬ್ಬ ವ್ಯಕ್ತಿಯು ಪ್ರತಿ ಮೈಲಿಗೆ 12 ನಿಮಿಷಗಳ ಕಾಲ ನಡೆಯಲು ಅಥವಾ ಪ್ರತಿ ಕಿಲೋಮೀಟರಿಗೆ ಕೇವಲ 7....