Bengfaluru,ಬೆಂಗಳೂರು, ಏಪ್ರಿಲ್ 23 -- ಬೆಂಗಳೂರು: ಭಾರತದ ಪ್ರಮುಖ ಕೋಳಿ ಉತ್ಪಾದಕ ಕಂಪನಿ ವೆಂಕೀಸ್ (Venky's), ಕೋಳಿ ಉತ್ಪಾದನೆಯಲ್ಲಿ ಪ್ರತಿಜೀವಕ (antibiotics) ಅನ್ನು ಬಳಸುತ್ತಿದೆ. ಔಷಧ ನಿರೋಧಕ ಸೋಂಕು ಹರಡುವುದನ್ನು ತಡೆಯುವುದಕ್ಕಾಗಿ ಬಳಸಿ ಎಂದು ಕೋಳಿ ಸಾಕಣಿಕೆದಾರರಿಗೆ ವಿತರಿಸುತ್ತಿದೆ ಎಂಬ ವಿಷಯದ ಮೇಲೆ ಬ್ಯೂರೋ ಆಫ್ ಇನ್ವೆಸ್ಟಿಗೇಟಿವ್ ಜರ್ನಲಿಸಂ (The Bureau of Investigative Journalism -TBIJ) ವರದಿ ಬೆಳಕು ಚೆಲ್ಲಿದೆ.

ಕೋಳಿಗಳ ಬೆಳವಣಿಗೆಗೆ ವೇಗ ನೀಡುವ ಉದ್ದೇಶದೊಂದಿಗೆ ಕಂಪನಿಯು ಮನುಷ್ಯನ ಆರೋಗ್ಯಕ್ಕೆ ಸಂಬಂಧಿಸಿದ ಔಷಧಗಳನ್ನು ಮಾರಾಟ ಮಾಡುತ್ತಿದೆ. ಬಹಳ ನಿರ್ಣಾಯಕವೆನಿಸುವ ಈ ಪ್ರತಿಜೀವಕಗಳನ್ನು ಸೋಂಕು "ತಡಗಟ್ಟುವ ಬಳಕೆ" (preventative use) ಯ ಹಣೆಪಟ್ಟಿಯೊಂದಿಗೆ ಮಾರಾಟ ಮಾಡಲಾಗುತ್ತಿದೆ. ಒಂದು ದಿನದ ಕೋಳಿ ಮರಿಗೆ ರೋಗ ಸಾಧ್ಯತೆ ಕಡಿಮೆ ಮಾಡುವುದಕ್ಕೆ ಈ ಪ್ರತಿಜೀವಕವನ್ನು ನೀಡಲು ಸಲಹೆ ನೀಡಲಾಗುತ್ತಿದೆ. ಕಂಪನಿಯ ಈ ನಡೆಯು ವಿವಾದಾತ್ಮಕವಾದ ಅಭ್ಯಾಸ ಎಂದು ವರದಿ ವ್ಯಾಖ್ಯಾನಿಸಿದೆ.

ದ...