ಭಾರತ, ಏಪ್ರಿಲ್ 30 -- ನಾವು ಸೇವಿಸುವ ಆಹಾರ ಮನಸ್ಸಿಗೆ ಇಷ್ಟವಾದರೆ, ಅದು ದೇಹಕ್ಕೂ ಇಷ್ಟವಾಗುತ್ತದೆ ಎಂಬುದು ಹಿರಿಯರ ಮಾತು. ಒಂದೇ ರೀತಿಯ ಊಟ ಯಾರಿಗೂ ರುಚಿಸುವುದಿಲ್ಲ. ಪೋಷಕಾಂಶಗಳಿಂದ ಕೂಡಿದ ವೈವಿಧ್ಯಮಯ ಅಡುಗೆಗಳು ಊಟದಲ್ಲಿದ್ದರೆ ಆಗ ಊಟದ ಗಮ್ಮತ್ತೇ ಬೇರೆ. ವಿವಿಧ ರೀತಿಯ ಸಾಂಬಾರು, ಚಟ್ನಿ, ಪಲ್ಯಗಳಿರುವಂತೆ ಪರಾಠಗಳಲ್ಲಿಯೂ ಇದೆ. ತರಕಾರಿಗಳಿಂದ ಪರಾಠವನ್ನು ತಯಾರಿಸುವುದು ಎಲ್ಲರಿಗೂ ತಿಳಿದಿದೆ. ಆದರೆ ಕಡಲೆ ಬೇಳೆಯಿಂದಲೂ ಪರಾಠ ತಯಾರಿಸಲಾಗುತ್ತದೆ. ಕಡಲೆ ಬೇಳೆಯಿಂದ ಬರೀ ಸಿಹಿ ಅಡುಗೆ, ಹೋಳಿಗೆ, ಕೋಸಂಬರಿ ಮಾತ್ರ ತಯಾರಿಸಬಹುದು ಎಂದು ನೀವಂದುಕೊಂಡಿದ್ದರೆ ಮಸಾಲೆಗಳನ್ನು ಸೇರಿಸಿ ರುಚಿಯಾದ ಕಡಲೆ ಬೇಳೆ ಪರಾಠ ಕೂಡಾ ತಯಾರಿಸಬಹುದು. ಮೃದುವಾದ ಮತ್ತು ಗರಿಗರಿಯಾದ ಪರಾಠವನ್ನು ಗೋಧಿ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಗೋಧಿ ಹಿಟ್ಟು ಮತ್ತು ಬೇಳೆಯಿಂದ ತಯಾರಿಸುವುದರಿಂದ ಆರೋಗ್ಯಕರ ಊಟದ ಆಯ್ಕೆಯಾಗಿದೆ. ಇದನ್ನು ದಿನದ ಯಾವುದೇ ಸಮಯದಲ್ಲೂ ಸವಿಯಬಹುದು.

ಕಡಲೆ ಬೇಳೆ ಪರಾಠವು ರುಚಿಯಾದ ಪೌಷ್ಟಿಕ ಆಹಾರವಾಗಿದೆ. ಗೋಧಿ ಹಿಟ್ಟು, ...