Bengaluru, ಫೆಬ್ರವರಿ 14 -- Valentine Day 2024: ಇಂದು (ಫೆ 14) ಪ್ರೇಮಿಗಳ ದಿನ. ಪ್ರೀತಿಸುವ ಜೀವಗಳಿಗೆ ಇಂದು ವಿಶೇಷವಾದ ದಿನ. ನಿನ್ನೆ ರಾತ್ರಿಯಿಂದಲೇ ಪ್ರೇಮಿಗಳ ನಡುವೆ ಶುಭಾಶಯ ವಿನಿಮಯ ಆರಂಭವಾಗಿರುತ್ತದೆ. ಕಳೆದ ಒಂದು ವಾರದಿಂದ ಚಾಕೊಲೇಟ್‌ ಡೇ, ಪ್ರಪೋಸ್‌ ಡೇ, ಪ್ರಾಮಿಸ್‌ ಡೇ, ಹಗ್‌ ಡೇ ಎಂದೆಲ್ಲಾ ಒಂದೊಂದು ವಿಶೇಷ ದಿನವನ್ನು ಆಚರಿಸಿರುವ ಪ್ರೇಮಿಗಳು ಇಂದು ತಮ್ಮ ವಿಶೇಷ ದಿನವನ್ನು ಇನ್ನಷ್ಟು ಮಮೋರಬಲ್‌ ಆಗಿ ಆಚರಿಸಲು ಹೊರಟಿದ್ದಾರೆ.

ಪ್ರತಿ ಪ್ರೇಮಿಯೂ ತನ್ನ ಸಂಗಾತಿಯ ಮುಂದೆ ಬಹಳ ಆಕರ್ಷಕವಾಗಿ ಕಾಣಲು ಬಯಸುತ್ತಾರೆ. ಮೊದಲ ನೋಟದಲ್ಲೇ ಪ್ರೇಮಿಯನ್ನು ಹೃದಯದಲ್ಲಿ ಬಂಧಿಯಾಗಿಸುವಂತೆ ಕಾತರಿಸುತ್ತಾರೆ. ಇನ್ನ ಯುವತಿಯರಿಗೆ ಮೇಕಪ್‌ ಎಂದರೆ ಬಹಳ ಇಷ್ಟ. ಸಾಮಾನ್ಯ ದಿನಗಳಲ್ಲೇ ತಮ್ಮ ಸೌಂದರ್ಯವನ್ನು ಅಷ್ಟು ಕೇರ್‌ ಮಾಡುವ ಯುವತಿಯರು ಇಂದು ಪ್ರೇಮಿಗಳ ದಿನದಂದು ಇನ್ನಷ್ಟು ಗ್ಲಾಮರಸ್‌ ಆಗಿ ಕಾಣಲು ಬಯಸುತ್ತಾರೆ. ಆದ್ದರಿಂದ ನೀವು ಇಂದು ಯಾವ ರೀತಿ ಮೇಕಪ್‌ ಆಗಬಹುದು ಎಂಬುದಕ್ಕೆ ಇಲ್ಲಿ ಕೆಲವೊಂದು ಟಿಪ್ಸ್‌ ಇವೆ. ಈ 7 ...