ಭಾರತ, ಫೆಬ್ರವರಿ 15 -- ನೆಕ್ಸಾನ್ ಫೇಸ್‌ಲಿಫ್ಟ್ ಕ್ರ್ಯಾಶ್ ಟೆಸ್ಟ್‌ನಲ್ಲಿ 5 ಸ್ಟಾರ್ ರೇಟಿಂಗ್ ಅನ್ನು ಸಾಧಿಸಿದೆ ಎಂದು Global NCAP ಇತ್ತೀಚೆಗೆ ಘೋಷಣೆ ಮಾಡಿದೆ. ಸಬ್-4 ಮೀಟರ್ ಕಾಂಪ್ಯಾಕ್ಟ್ ಎಸ್‌ಯುವಿ ವಯಸ್ಕರ ಸುರಕ್ಷತೆಗಾಗಿ 34 ಅಂಕಗಳಲ್ಲಿ 42.22 ಪಡೆದುಕೊಂಡಿದೆ. ಅದೇ ರೀತಿಯಲ್ಲಿ ಮಕ್ಕಳ ರಕ್ಷಣೆಯ ವಿಚಾರದಲ್ಲಿ 49 ಅಂಕಗಳಲ್ಲಿ 44.52 ಅಂಕಗಳನ್ನು ಪಡೆದುಕೊಂಡಿದೆ.

ಟಾಟಾ ನೆಕ್ಸಾನ್ 2018 ರಲ್ಲಿ ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ ಫೈವ್ ಸ್ಟಾರ್ ರೇಟಿಂಗ್ ಗಳಿಸಿದ ಮೊದಲ ಭಾರತೀಯ ಕಾರು ಎಂಬ ದಾಖಲೆಯನ್ನು ಸೃಷ್ಟಿಸಿದೆ ಎಂದ ಟಾಟಾ ಮೋಟಾರ್ಸ್ ಈ ಮೊದಲು ಹೇಳಿತ್ತು.

ಇದನ್ನೂ ಓದಿ: ಮಾರುಕಟ್ಟೆಗೆ ಬರಲು ಹ್ಯುಂಡೈ ಹೊಸ ಎಲೆಕ್ಟ್ರಿಕ್ ಕಾರು ರೆಡಿ; ಕಾಸ್ಪರ್ ಇವಿ ಬೆಲೆ, ವೈಶಿಷ್ಟ್ಯಗಳು ಹೀಗಿವೆ

ಟಾಟಾ ನೆಕ್ಸಾನ್‌ನ ಬಾಡಿಶೆಲ್ ಸಮಗ್ರತೆ ಮತ್ತು ಫುಟ್‌ವೆಲ್ ಪ್ರದೇಶವು ಸುರಕ್ಷಿತವಾಗಿದೆ ಎಂದು ಗ್ಲೋಬಲ್ ಎನ್‌ಸಿಪಿ ವರದಿ ಮಾಡಿದೆ. ನೆಕ್ಸಾನ್‌ನಲ್ಲಿ ಸೈಡ್ ಇಂಪ್ಯಾಕ್ಟ್ ಪ್ರೊಟೆಕ್ಷನ್ ಡೋರ್ ಕೂಡ ಇ...