Bengaluru, ಮೇ 10 -- ಗೋಚಾರದಲ್ಲಿ ಸೂರ್ಯನು ತಿಂಗಳಿಗೊಮ್ಮೆ ಒಂದು ರಾಶಿಯಿಂದ ಮತ್ತೊಂದು ರಾಶಿಯನ್ನು ಪ್ರವೇಶಿಸುತ್ತಾನೆ. ಆದರೆ ದೊರೆವ ಫಲಾಫಲಗಳು ವಿಭಿನ್ನವಾಗಿರುತ್ತದೆ. ಸೂರ್ಯನನ್ನು ಜ್ಯೋತಿಷ್ಯದಲ್ಲಿ ರಾಜಗ್ರಹ ಎಂದು ಕರೆಯುತ್ತಾರೆ. ಜನ್ಮಕುಂಡಲಿಯಲ್ಲಿಯಾಗಲಿ ಅಥವಾ ಮದುವೆ, ಗೃಹಪ್ರವೇಶ ಮುಂತಾದುವುಗಳ ಮುಹೂರ್ತದಲ್ಲಿ ಸೂರ್ಯನು ಸಶಕ್ತನಾಗಿದ್ದಾಲ್ಲಿ ಅಧಿಕ ಶುಭಫಲಗಳು ದೊರೆಯುತ್ತವೆ.

2024ರ ಮೇ 14ರಂದು ಸಂಜೆ 05.17ಕ್ಕೆ ಸೂರ್ಯನು ಮೇಷ ರಾಶಿಯಿಂದ ವೃಷಭ ರಾಶಿಯನ್ನು ಪ್ರವೇಶಿಸುತ್ತಾನೆ. ರವಿಗೆ ಇದು ಶತ್ರು ಕ್ಷೇತ್ರವಾಗುತ್ತದೆ. ಸೂರ್ಯನು ಗುರುವಿನ ಜೊತೆ ಇರುವ ಕಾರಣ ಶಕ್ತಿಶಾಲಿಯಾಗಿರುತ್ತಾನೆ. ಇದರಿಂದ ಕೆಲವು ರಾಶಿಗಳಿಗೆ ಉತ್ತಮ, ಕೆಲವು ರಾಶಿಗಳಿಗೆ ಮಧ್ಯಮ ಮತ್ತು ಇನ್ನೂ ಕೆಲವು ರಾಶಿಗಳಿಗೆ ಸಾಧಾರಣ ಫಲಗಳನ್ನು ನೀಡುತ್ತಾನೆ. ಸೂರ್ಯನು ಯಾವ ರಾಶಿಗಳಿಗೆ ಯಾವ ಫಲ ನೀಡುತ್ತಾನೆ ನೋಡೋಣ.

ಬುದ್ಧಿವಂತಿಕೆಯಿಂದ ಕುಟುಂಬವನ್ನು ಯಶಸ್ವಿನತ್ತ ಮುನ್ನಡೆಸುವಿರಿ. ಯಾರ ಸಲಹೆಯನ್ನು ಒಪ್ಪದೇ ಸ್ವಂತ ನಿರ್ಧಾರಗಳಿಗೆ ಬದ್ದರಾಗು...