ಭಾರತ, ಮೇ 2 -- ಮಂಗಳೂರು (ದಕ್ಷಿಣ ಕನ್ನಡ): ಪ್ರತಿ ವರ್ಷದಂತೆ ಈ ಬಾರಿಯೂ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಸಾಮೂಹಿಕ ವಿವಾಹ (Dharmasthala Mass Marriage Program) ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿದೆ. ಬುಧವಾರ ಸಂಜೆ 6.45ಕ್ಕೆ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ 39 ಜೋಡಿ ಅಂತರ್ಜಾತಿಯ ವಿವಾಹ ಸೇರಿದಂತೆ ಒಟ್ಟು 123 ಜೋಡಿ ಧರ್ಮಸ್ಥಳದಲ್ಲಿ ನಡೆದ 52ನೇ ಸಾಮೂಹಿಕ ವಿವಾಹ (52nd Mass Marriage 2024) ಸಮಾರಂಭದಲ್ಲಿ ಹಸೆಮಣೆಗೇರಿದ್ದಾರೆ. ವಿವಾಹ ವಿಧಿಗಳನ್ನು ನೆರವೇರಿಸಿ ಸತಿಪತಿಗಳಾದರು. ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದವರನ್ನು ನೆರೆದಿದ್ದವರು ಆಶೀರ್ವದಿಸಿದ್ದಾರೆ. ವಿವಾಹ ಸಮಾರಂಭದಲ್ಲಿ ಚಲನಚಿತ್ರ ನಟ ದೊಡ್ಡಣ್ಣ ಮತ್ತು ಪತ್ನಿ ಶಾಂತಾ ಹಾಗೂ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ವಿ. ಹೆಗ್ಗಡೆ ಮಂಗಳಸೂತ್ರ ವಿತರಿಸಿದರು.

ಇದನ್ನೂ ಓದಿ: ದಾಂಪತ್ಯ ಜೀವನವನ್ನು ಸದಾ ಸಂತೋಷವಾಗಿಡುವ 8 ರಹಸ್ಯಗಳಿವು

ಬುಧವಾರ ಬೆಳಗ್ಗಿನಿಂದಲೆ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಮತ್ತು ಹೇಮಾವ...