ಭಾರತ, ಏಪ್ರಿಲ್ 20 -- ಇಂಪಾಲ (ಮಣಿಪುರ): ಲೋಕಸಭೆ ಚುನಾವಣೆಯ (Lok Sabha Election 2024) ಮೊದಲ ಹಂತದ ಮತದಾನಕ್ಕೆ ಸಾಕ್ಷಿಯಾಗಿರುವ ಮಣಿಪುರದಲ್ಲಿ ಮತದಾನದ (Manipal Election 2024) ವೇಳೆಯೇ ಗುಂಡಿನ ದಾಳಿ ನಡೆದಿರುವುದಾಗಿದಿ ವರದಿಯಾಗಿದೆ. ಅಷ್ಟೇ ಅಲ್ಲ, ವಿದ್ಯುನ್ಮಾನ ಮತಯಂತ್ರಗಳಿಗೆ (ಇವಿಎಂ) ಹಾನಿ, ಶಸ್ತ್ರಸಜ್ಜಿತ ದುಷ್ಕರ್ಮಿಗಳಿಂದ ಮತದಾರರು ಮತ್ತು ಮತಗಟ್ಟೆ ಏಜೆಂಟರಿಗೆ ಬೆದರಿಕೆ ಹಾಕಿರುವ ಘಟನೆಗಳು ಶುಕ್ರವಾರ (ಏಪ್ರಿಲ್ 19) ನಡೆದಿವೆ. ಮೊದಲ ಹಂತದಲ್ಲಿ ಇನ್ನರ್ ಮಣಿಪುರ ಸಂಸದೀಯ ಸ್ಥಾನ ಮತ್ತು ಹೊರ ಮಣಿಪುರ ಸ್ಥಾನದ ಒಂದು ಭಾಗದಲ್ಲಿ ಮತದಾನ ನಡೆಯಿತು. ಮಣಿಪುರ ಹೊರವಲಯ ಕ್ಷೇತ್ರದ ಉಳಿದ ಪ್ರದೇಶಗಳಿಗೆ ಏಪ್ರಿಲ್ 26 ರಂದು ಎರಡನೇ ಹಂತದಲ್ಲಿ ಮತದಾನ ನಡೆಯಲಿದೆ.

ಬಿಷ್ಣುಪುರ ಜಿಲ್ಲೆಯ ಮೊಯಿರಾಂಗ್ ಕ್ಷೇತ್ರದ ತಮ್ನಾಪೊಕ್ಪಿಯಲ್ಲಿ, ಮತಗಟ್ಟೆಯ ಬಳಿ ಶಸ್ತ್ರಸಜ್ಜಿತ ವ್ಯಕ್ತಿಗಳು ಗಾಳಿಯಲ್ಲಿ ಹಲವಾರು ಸುತ್ತು ಗುಂಡು ಹಾರಿಸಿದಾಗ ಮತದಾರರು ಭಯಭೀತರಾಗಿ ಓಡಿಹೋದರು ಎಂದು ಪೊಲೀಸರ ಹೇಳಿಕೆಯನ್ನು ಉಲ್ಲೇಖಿಸಿ ಪಿಟ...