Bangalore, ಏಪ್ರಿಲ್ 28 -- ಬೆಂಗಳೂರು, ಮಂಗಳೂರು, ಮೈಸೂರು, ಹಾಸನ ಸೇರಿದಂತೆ ಕರ್ನಾಟಕದ ಬಹುತೇಕ ಕಡೆ ಬೆಂಕಿಯಂತಹ ಬಿಸಿಲು. ಎಷ್ಟು ಫ್ಯಾನ್‌ ಇದ್ದರೂ ಸಾಲದೆಂದು ಕೂಲರ್‌ ಖರೀದಿಗಸಲು ಹಿಂಜರಿಯುತ್ತಿಲ್ಲ. ಈ ಸಮಯದಲ್ಲಿ ಸಾಕಷ್ಟು ಜನರು ಮನೆಗೆ ಏಸಿ ಅಳವಡಿಸಬಹುದು. ಮಧ್ಯಾಹ್ನದ ವೇಳೆ ಮನೆಯಿಂದ ಹೊರಕ್ಕೆ ಹೋಗಬಾರದೆಂಬ ಎಚ್ಚರಿಕೆಯೂ ಇದೆ. ಅಯ್ಯೋ ಎಷ್ಟೊಂದು ಬಿಸಿಲು ಎಂದು ದೂರುತ್ತ ಮನೆಯೊಳಗೆ ಕೂಲ್‌ ಆಗಿರುವ ಸಿನಿಮಾ ನೋಡಲು ಕೆಲವರು ಬಯಸಬಹುದು. ಕೂಲ್‌ ಆಗಿರುವ ಸಿನಿಮಾಗಳ ಬದಲು ಹೀಟ್‌ ಆಗಿರುವ ಸಿನಿಮಾ ನೋಡಲು ಬಯಸಿದರೆ ಇಲ್ಲಿ ಐದಾರೂ ಹೀಟ್‌ವೇವ್‌ ಸಿನಿಮಾಗಳ ವಿವರ ನೀಡಿದ್ದೇವೆ. ಇದರಲ್ಲಿ ಕ್ಲಾಸಿಕ್‌ ಸಿನಿಮಾಗಳೂ ಇವೆ.

1954ರ ಸಿನಿಮಾವಿದು. ಸಿನಿಮಾ ಅಧ್ಯಯನ ಮಾಡುವವರು ತಪ್ಪದೇ ಈ ಸಿನಿಮಾ ನೋಡಿರುತ್ತೀರಿ. ಆಲ್‌ಫ್ರಡ್‌ ಹಿಚ್‌ಕಾಕ್‌ ನಿರ್ದೇಶನದ ಅಮೆರಿಕದ ಮಿಸ್ಟ್ರಿ ಥ್ರಿಲ್ಲರ್‌ ಸಿನಿಮಾವಿದು. ಕಾಲು ಮುರಿದುಕೊಂಡು ಗಾಲಿಕುರ್ಚಿಯಲ್ಲಿಯೇ ಬದುಕು ಸವೆಸುತ್ತಿರುವ ಜೇಮ್ಸ್‌ ಸ್ಟಿವರ್ಟ್‌ ಕಿಟಕಿ ಮೂಲಕ ನೆರೆಮನೆಯವರ ಬದುಕಿನ...