ಭಾರತ, ಏಪ್ರಿಲ್ 21 -- ಬೇಸಿಯಲ್ಲಿನ ಸುಡು ಬಿಸಿಲು ಅನೇಕ ಆರೊಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತೆ. ಅದರಲ್ಲೂ ದೇಹವನ್ನು ತಂಪಾಗಿಸಲು ಸೂಕ್ತ ಆಹಾರ, ಪಾನೀಯಗಳನ್ನ ಸೇವಿಸಿದ್ರು ದೇಹದ ಉಷ್ಣತೆ ಇಳಿಯುತ್ತಿಲ್ಲವೇಕೆ ಎಂಬ ಚಿಂತೆ ನಿಮ್ಮನ್ನು ಕಾಡುತ್ತಿರಬಹುದು. ಆಹಾರದ ಜೊತೆ ಜೊತೆಗೆ ಕೆಲ ಪ್ರಾಣಾಯಾಮಗಳನ್ನು (Pranayama) ಮಾಡುವುದರಿಂದ ದೇಹದ ಉಷ್ಣತೆಯನ್ನ ಕಡಿಮೆ ಮಾಡಿಕೊಳ್ಳಬಹುದು. ಯೋಗವಿಜ್ಞಾನದ ಪ್ರಮುಖ ಭಾಗವಾಗಿರುವ ಪ್ರಾಣಾಯಾಮ ಉಸಿರಾಡುವ ಕಲೆಯನ್ನು ಕಲಿಸುವ ವಿಧಾನವಾಗಿದೆ. ಉಸಿರಾಟದ ನಿಯಂತ್ರಣವೇ ಪ್ರಾಣಾಯಾಮ. ಪ್ರಾಣಾಯಾಮದ ಮೂಲಕ ದೇಹ ಹಾಗೂ ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳಲು ಸಾಧ್ಯವಾಗುತ್ತದೆ. ಅದರಲ್ಲಿ ದೇಹದ ಉಷ್ಣತೆ ಹೆಚ್ಚಾದಾಗ ಪ್ರಾಣಾಯಾಮದ ಮೂಲಕ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವಿದೆ. ಹಾಗಾದರೆ ಯಾವೆಲ್ಲಾ ಪ್ರಾಣಾಯಾಮಗಳಿಂದ ದೇಹದ ಉಷ್ಣತೆ ಕಡಿಮೆ ಮಾಡಿಕೊಳ್ಳಬಹುದು ಎಂಬುದರ ವಿವರ ಇಲ್ಲಿದೆ.

ದೇಹವನ್ನು ತಂಪಾಗಿಸಲು ಇದೊಂದು ಉತ್ತಮ ಪ್ರಾಣಾಯಾಮವಾಗಿದೆ. ಪಿತ್ತವನ್ನು ಸಮತೋಲನದಲ್ಲಿರಿಸಿ, ವಾತ ಹಾಗೂ ಕಫವ...