ಭಾರತ, ಮೇ 3 -- ಅನುವಾದ: ಪ್ರಾರ್ಥನೇ, ಭ್ರಾಂತಿಗೆ ಸಿಲುಕದ ಮಹಾತ್ಮರು ದೈವೀ ಪ್ರಕೃತಿಯ ರಕ್ಷಣೆಯಲ್ಲಿ ಇರುತ್ತಾರೆ. ಅವರಿಗೆ ನಾನು ಮೂಲನೂ ಅವ್ಯಯನೂ ಆದ ದೇವೋತ್ತಮ ಪರಮ ಪುರುಷನು ಎಂದು ಗೊತ್ತು. ಆದುದರಿಂದ ಅವರು ಭಕ್ತಿಸೇವೆಯಲ್ಲಿ ಸಂಪೂರ್ಣವಾಗಿ ನಿರತರಾಗಿರುತ್ತಾರೆ.

ಭಾವಾರ್ಥ: ಈ ಶ್ಲೋಕದಲ್ಲಿ ಮಹಾತ್ಮನನ್ನು ಸ್ಪಷ್ಟವಾಗಿ ವರ್ಣಿಸಿದೆ. ಮಹಾತ್ಮನ ಮೊದಲನೆಯ ಲಕ್ಷಣವೆಂದರೆ ಆತನು ಆಗಲೇ ದೈವೀ ಪ್ರಕೃತಿಯಲ್ಲಿ ನೆಲೆಸಿದ್ದಾನೆ. ಆತನು ಐಹಿಕ ಪ್ರಕೃತಿಯ ನಿಯಂತ್ರಣದಲ್ಲಿ ಇಲ್ಲ. ಇದನ್ನು ಸಾಧಿಸುವುದು ಹೇಗೆ? ಇದನ್ನು ಏಳನೆಯ ಅಧ್ಯಾಯದಲ್ಲಿ ವಿವರಿಸಿದೆ. ದೇವೋತ್ತಮ ಪರಮ ಪುರುಷನಾದ ಶ್ರೀಕೃಷ್ಣನಿಗೆ ಶರಣಾಗತವಾದವನು ಕೂಡಲೇ ಐಹಿಕ ಪ್ರಕೃತಿಯ ನಿಯಂತ್ರಣದಿಂದ ಬಿಡುಗಡೆ ಹೊಂದುತ್ತಾನೆ. ಅದೇ ಅರ್ಹತೆ. ಮನುಷ್ಯನು ತನ್ನ ಆತ್ಮವನ್ನು ದೇವೋತ್ತಮ ಪರಮ ಪುರುಷನಿಗೆ ಒಪ್ಪಿಸುತ್ತಲೇ ಆತನುಐಹಿಕ ಪ್ರಕೃತಿಯ ನಿಯಂತ್ರಣದಿಂದ ಬಿಡುಗಡೆಯಾಗುತ್ತಾನೆ. ಇದು ಪ್ರಾಥಮಿಕ ಸೂತ್ರ.

ಇದನ್ನೂ ಓದಿ: ಮನುಷ್ಯ ಈ 4 ವಿಷಯಗಳಲ್ಲಿ ಬಲವಾಗಿ ನಿಂತಾಗ ಪರಿಶುದ...