ಭಾರತ, ಮೇ 8 -- ಅನುವಾದ: ಹೀಗೆ ಅವರು ಸ್ವರ್ಗಲೋಕದ ಅಪಾರವಾದ ಇಂದ್ರಿಯ ಭೋಗವನ್ನು ಸವಿದು, ತಮ್ಮ ಪುಣ್ಯಕಾರ್ಯಗಳ ಫಲಗಳು ಕ್ಷಯಿಸಿದನಂತರ ಈ ಮರ್ತ್ಯಲೋಕಕ್ಕೆ ಹಿಂದಿರುಗುತ್ತಾರೆ. ಹೀಗೆ ಮೂರು ದೇವತೆಗಳ ತತ್ವಗಳ ಅನುಸರಣೆಯಿಂದ ಇಂದ್ರಿಯ ಸುಖವಷ್ಟನ್ನೇ ಅರಸುವವರು ಮತ್ತೆಮತ್ತೆ ಹುಟ್ಟಿ ಸಾಯುವುದಷ್ಟನ್ನೇ ಸಾಧಿಸುತ್ತಾರೆ (Bhagavad Gita Updesh in Kannada).

ಭಾವಾರ್ಥ: ಮೇಲಿನ ಲೋಕವ್ಯೂಹಗಳಿಗೆ ಏರಿದವನು ಇನ್ನೂ ದೀರ್ಘವಾದ ಆಯಸ್ಸನ್ನೂ ಇಂದ್ರಿಯ ಸುಖಗಳಿಗೆ ಇನ್ನೂ ಹೆಚ್ಚಿನ ಸೌಲಭ್ಯಗಳನ್ನೂ ಪಡೆಯುತ್ತಾರೆ. ಆದರೆ ಅಲ್ಲಿ ಶಾಶ್ವತವಾಗಿ ಉಳಿಯಲು ಅವನಿಗೆ ಅನುಮತಿ ದೊರೆಯುವುದಿಲ್ಲ. ಪುಣ್ಯಕಾರ್ಯಗಳ ಫಲಗಳನ್ನು ಮುಗಿಸಿದ ನಂತರ ಅವನನ್ನು ಭೂಮಿಗೆ ಮತ್ತೆ ಕಳಿಸಲಾಗುತ್ತದೆ. ವೇದಾಂತ ಸೂತ್ರದಲ್ಲಿ ಸೂಚಿಸಿರುವಂತೆ ಆತನು ಪರಿಪೂರ್ಣ ಜ್ಞಾನವನ್ನು ಪಡೆದಿರುವುದಿಲ್ಲ (ಜನ್ಮಾದಿ ಅಸ್ಯ ಯತಃ).

ಇದನ್ನೂ ಓದಿ: ಭಗವಂತನ ದೇಹ ಸಂಪೂರ್ಣ ಜ್ಞಾನಾನಂದಗಳ ಸಂಕೇತ; ಗೀತೆಯ ಅರ್ಥ ಹೀಗಿದೆ

ಬೇರೆ ಮಾತುಗಳಲ್ಲಿ ಹೇಳಬೇಕಾದರೆ, ಎಲ್ಲ ಕಾರಣಗಳ ಕಾರಣ...