ಭಾರತ, ಮೇ 2 -- ಬೆಂಗಳೂರಿನಲ್ಲಿ 2024ರ ಏಪ್ರಿಲ್ ತಿಂಗಳು ಕಳೆದ ನಾಲ್ಕು ದಶಕಗಳಲ್ಲಿ ಅತ್ಯಂತ ಶುಷ್ಕ ಏಪ್ರಿಲ್ ಎಂದು ಗುರುತಿಸಲ್ಪಟ್ಟಿದೆ. ಏಕೆಂದರೆ ನಗರದ ಭಾರತೀಯ ಹವಾಮಾನ ವೀಕ್ಷಣಾಲಯ (ಐಎಂಡಿ) ನಗರದಲ್ಲಿ ಯಾವುದೇ ಮಳೆಯನ್ನು ಕಂಡಿಲ್ಲ. ನಗರದಲ್ಲಿ ಹಿಂದಿನ ಏಪ್ರಿಲ್‌ ತಿಂಗಳಲ್ಲಿ ಶೂನ್ಯ ಮಳೆಯಾಗಿದೆ. ಎಂದು ಐಎಂಡಿ ಹಿರಿಯ ವಿಜ್ಞಾನಿ ಎ ಪ್ರಸಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. "ಕಳೆದ 41 ವರ್ಷಗಳಲ್ಲಿ, ಬೆಂಗಳೂರಿನಲ್ಲಿ ಏಪ್ರಿಲ್‌ನಲ್ಲಿ ಮಳೆಯಾಗದಿರುವುದು ಇದೇ ಮೊದಲು. ಅಸಾಮಾನ್ಯ ಶಾಖಕ್ಕೆ ಕಾರಣವಾದ ಎಲ್ ನಿನೊ ಸ್ಥಿತಿಯು ತಟಸ್ಥ ಅಥವಾ ಶೂನ್ಯಕ್ಕೆ ರೂಪಾಂತರಗೊಳ್ಳುವ ಸಾಧ್ಯತೆಯಿದೆ. ನಾವು ಲಾ ನಿನಾ ಸ್ಥಿತಿಯನ್ನು ನಿರೀಕ್ಷೆ ಇದ್ದು, ಇದರ ಪರಿಣಾಮವಾಗಿ ಮಳೆಯಾಗುತ್ತದೆ ಎಂದು ವರದಿಯಾಗಿದೆ.

ಜಾಗತಿಕ ತಾಪಮಾನ ಏರಿಕೆ, ತ್ವರಿತ ನಗರೀಕರಣ, ಜನಸಂಖ್ಯೆಯ ಹೆಚ್ಚಳ ಹಾಗೂ ಎಲ್ ನಿನೊ ಐಟಿ ಬಿಟಿ ರಾಜಧಾನಿ ಬೆಂಗಳೂರಿನಲ್ಲಿ ಕಠಿಣ ಹವಾಮಾನ ಪರಿಸ್ಥಿತಿಗಳಿಗೆ ಕಾರಣಗಳಾಗಿವೆ ಎಂದು ಹಿರಿಯ ವಿಜ್ಞಾನಿ ಹೇಳಿದ್ದಾರೆ. ಏಪ್ರಿಲ್ 19 ಮತ್...