ಭಾರತ, ಮೇ 4 -- Rakshitha Prem about Ramya: 2000ರ ಬಳಿಕ ಸ್ಯಾಂಡಲ್‌ವುಡ್‌ ಕಂಡ ಸ್ಟಾರ್‌ ನಟಿಯರ ಪೈಕಿ ರಮ್ಯಾ ಮತ್ತು ರಕ್ಷಿತಾ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತದೆ. ಎರಡು ದಶಕಗಳ ಹಿಂದೆ ಈ ನಟಿಯರು ಇಡೀ ಸ್ಯಾಂಡಲ್‌ವುಡ್‌ ಚಿತ್ರರಂಗವನ್ನೇ ಆಳುತ್ತಿದ್ದರು. ಸ್ಟಾರ್‌ ಹೀರೋಗಳಿಗೆ ನಾಯಕಿಯರಾಗಿ ಒಂದಾದ ಮೇಲೊಂದು ಹಿಟ್‌ ಸಿನಿಮಾಗಳನ್ನು ನೀಡುತ್ತಲೇ ಬಂದಿದ್ದರು. ಬರೀ ಕನ್ನಡ ಸಿನಿಮಾಗಳಿಗಷ್ಟೇ ಸೀಮಿತವಾಗದ ಈ ಇಬ್ಬರು ನಟಿಯರು, ಪಕ್ಕದ ತೆಲುಗು, ತಮಿಳು ಚಿತ್ರೋದ್ಯಮದಲ್ಲೂ ಹೆಸರು ಮಾಡಿದ್ದರು. ಸ್ಟಾರ್‌ ಡಮ್‌ ಸೃಷ್ಟಿಸಿಕೊಂಡಿದ್ದರು.

2002ರಲ್ಲಿ ವಜ್ರೇಶ್ವರಿ ಕಂಬೈನ್ಸ್‌ನಲ್ಲಿ ಪುನೀತ್‌ ರಾಜ್‌ಕುಮಾರ್‌ ಅವರ ಅಪ್ಪು ಸಿನಿಮಾ ಮೂಲಕ ಚಂದನವನಕ್ಕೆ ಪರಿಚಿತರಾದರು ರಕ್ಷಿತಾ. ಮೊದಲ ಚಿತ್ರವೇ ಸೂಪರ್‌ ಹಿಟ್‌ ಆಗ್ತಿದ್ದಂತೆ, ಸಾಕಷ್ಟು ಸಿನಿಮಾ ಅವಕಾಶಗಳೂ ರಕ್ಷಿತಾ ಅವರನ್ನು ಅರಸಿ ಬಂದವು. ಅದಾದ ಬಳಿಕ 2003ರಲ್ಲಿ ಅದೇ ಪುನೀತ್‌ ರಾಜ್‌ಕುಮಾರ್‌ ಜತೆಗೆ ಅಭಿ ಚಿತ್ರದಲ್ಲಿ ರಮ್ಯಾ ಅವರನ್ನು ಪರಿಚಯಿಸಿದರು ಪಾರ್ವತಮ್ಮ ರಾಜ್...