ಭಾರತ, ಏಪ್ರಿಲ್ 27 -- Shruti haasan‌ Break up: ಬಹುಭಾಷಾ ನಟಿ ಶ್ರುತಿ ಹಾಸನ್‌ ಇತ್ತೀಚೆಗಷ್ಟೇ ಸಲಾರ್‌ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಹೊಂಬಾಳೆ ಫಿಲಂಸ್‌ ನಿರ್ಮಾಣದಲ್ಲಿ ಮೂಡಿಬಂದಿದ್ದ ಆ ಚಿತ್ರದಲ್ಲಿ ಪ್ರಭಾಸ್‌ಗೆ ಜೋಡಿಯಾಗಿ ನಟಿಸಿದ್ದರು. ಪ್ರಶಾಂತ್‌ ನೀಲ್‌ ಈ ಚಿತ್ರದ ನಿರ್ದೇಶಕರು. ದೊಡ್ಡ ಮಟ್ಟದಲ್ಲಿ ಯಶಸ್ಸು ಪಡೆದಿತ್ತು ಸಲಾರ್. ಹೀಗೆ ಸಿನಿಮಾ ಜತೆಗೆ ಅದರಾಚೆಗೂ ನಟಿ ಶ್ರುತಿ ಹಾಸನ್‌ ಸದಾ ಸುದ್ದಿಯಲ್ಲಿರುತ್ತಾರೆ. ಅದರಲ್ಲೂ ಪ್ರೀತಿ, ಲೀವ್‌ ಇನ್‌ ರಿಲೇಷನ್‌ಶಿಪ್‌ ಬಗ್ಗೆಯೂ ಚರ್ಚೆಯಲ್ಲಿರುತ್ತಾರೆ. ಈಗ ಅದೇ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.

ಮೈಕಲ್‌ ಕೊರ್ಸಾಲೆ ಜತೆಗಿನ ಬ್ರೇಕಪ್‌ ಬಳಿಕ ಬಹುಕಾಲದ ಗೆಳೆಯ ಟ್ಯಾಟೂ ಕಲಾವಿದ ಶಂತನು ಜತೆಗಿನ ಪ್ರೀತಿ ಪ್ರೇಮಕ್ಕೂ ಬ್ರೇಕ್‌ ಹಾಕಿದ ಶ್ರುತಿ ಹಾಸನ್‌, ಆತನ ಜತೆಗೂ ಪ್ರಣಯ ಸಂಬಂಧವನ್ನು ಮುರಿದುಕೊಂಡಿದ್ದಾರೆ. ಮುಂಬೈನಲ್ಲಿ ಕಳೆದ ಕೆಲವು ತಿಂಗಳಿಂದ ಒಂದೇ ಅಪಾರ್ಟ್‌ಮೆಂಟ್‌ನ ಮನೆಯಲ್ಲಿ ಒಟ್ಟಿಗೆ ಲೀವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿದ್ದರು. ಆದರೆ, ಅದ್ಯಾ...