ಭಾರತ, ಮೇ 2 -- ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಇದೀಗ ಬಿಸಿಲು ಸಿಟಿಯಾಗಿ ಬದಲಾಗುತ್ತಿದೆ. ಮಳೆಯ ಅಭಾವ ಈ ಬಾರಿಯ ರಣ ಬಿಸಿಲಿಗೆ (Sunlight) ಸಾಕ್ಷಿಯಾಗಿದೆ. ಏಪ್ರಿಲ್‌ನಲ್ಲಿ ಬೆಂಗಳೂರಿನ (Bangalore Weather) ಬಿಸಿಲು ಹಗಲಿನಲ್ಲಿ ಮಾತ್ರವಲ್ಲದೆ, ರಾತ್ರಿಯಲ್ಲೂ ಹೆಚ್ಚಾಗಿದೆ. ನಗರದಲ್ಲಿನ ತಾಪಮಾನ ರಾತ್ರಿ ವೇಳೆ (Bengaluru Night Temperature) ಹೆಚ್ಚಾಗಿದೆ. ಏಪ್ರಿಲ್ 28 ಮತ್ತು 29 ರಂದು ಬೆಂಗಳೂರಿನಲ್ಲಿ ಕನಿಷ್ಠ ತಾಪಮಾನ 25 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಇದು ಕಳೆದ ದಶಕದಲ್ಲಿ ಏಪ್ರಿಲ್ ತಿಂಗಳ ರಾತ್ರಿ ವೇಳೆಯಲ್ಲಿನ ಗರಿಷ್ಠ ತಾಪಮಾನವಾಗಿದೆ ವರದಿಯಾಗಿದೆ.

ರಾತ್ರಿಯ ಸಮಯದಲ್ಲಿ 25 ಡಿಗ್ರಿ ಸೆಲ್ಸಿಯಸ್ ದಾಖಲಾಗಿರುವುದು ಸಾಮಾನ್ಯ ತಾಪಮಾನಕ್ಕಿಂತ 2.5 ಡಿಗ್ರಿ ಹೆಚ್ಚಾಗಿದೆ. ಭಾರತೀಯ ಹವಾಮಾನ ಇಲಾಖೆ 'ಆರೆಂಜ್ ಅಲರ್ಟ್' ನೀಡಿದೆ ಹಾಗೂ ಮೇ 3 (ಶುಕ್ರವಾರ) ರವರೆಗೆ ರಾತ್ರಿಯ ಸಮಯದಲ್ಲೂ ಬಿಸಿಯ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆಯನ್ನು ಆಧರಿಸಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡ...