Bengaluru, ಮೇ 9 -- 9 ಗ್ರಹಗಳಲ್ಲಿ ಎಲ್ಲರೂ ಶನಿ, ಕುಜರ ಬಗ್ಗೆ ಬಹಳ ಭಯ ಪಡುತ್ತಾರೆ. ಕುಜ ರಾಶಿ ಇದ್ದರೆ ಮದುವೆ ವಿಳಂಬ ಸೇರಿದಂತೆ ಜಾತಕದಲ್ಲಿ ಇನ್ನಿತರ ಸಮಸ್ಯೆಗಳು ಎದುರಾಗಬಹುದು. ಹಾಗೇ ಶನಿ ದೋಷ ಇದ್ದಲ್ಲಿ ಜೀವನದಲ್ಲಿ ಎಲ್ಲದರಲ್ಲೂ ಹಿಂದೆ ಉಳಿಯಬಹುದು ಎಂಬ ಭಯ ಜನರಿಗೆ ಕಾಡುತ್ತದೆ. ಆದರೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಶನಿಯು ಎಲ್ಲರಿಗೂ ಸಮಸ್ಯೆ ತರುವುದಿಲ್ಲ.

ಶನಿಯು ಎಲ್ಲಾ ಗ್ರಹಗಳಿಗಿಂತ ಬಹಳ ನಿಧಾನವಾಗಿ ಚಲಿಸುತ್ತಾನೆ. ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಾಗಲು ಸುಮಾರು ಎರಡೂವರೆ ವರ್ಷ ತೆಗೆದುಕೊಳ್ಳುತ್ತದೆ. ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ, ಶನಿಯು ಸೂರ್ಯನ ಮಗ. ಶನೈಶ್ಚರನ ಹೆಸರು ಕೇಳಿದರೆ ಅನೇಕರಿಗೆ ಭಯವಾಗುತ್ತದೆ. ಅವರ ಪ್ರಭಾವ ತಮ್ಮ ಮೇಲೆ ಬೀಳಬಾರದು ಎಂದು ಬಯಸುತ್ತಾರೆ. ಆದರೆ ಶನಿ ದೇವರು ನಮ್ಮ ಕರ್ಮಗಳಿಗೆ ಅನುಗುಣವಾಗಿ ಫಲಿತಾಂಶಗಳನ್ನು ನೀಡುತ್ತಾನೆ ಎಂದು ಹಲವರು ನಂಬುತ್ತಾರೆ.

ಯಾರ ಜಾತಕದಲ್ಲಿ ಶನಿಯು ಪ್ರಬಲ ಸ್ಥಾನದಲ್ಲಿದ್ದಾರೋ ಅವರಿಗೆ ಉತ್ತಮ ಫಲಿತಾಂಶಗಳು ದೊರೆಯುವುದು ಮಾತ್ರವಲ್ಲದೆ ಆ...