ಭಾರತ, ಮೇ 5 -- Kotee Dinu Saavkaar Look: ಡಾಲಿ ಧನಂಜಯ್‌ ನಾಯಕನಾಗಿ ನಟಿಸುತ್ತಿರುವ ಕೋಟಿ ಸಿನಿಮಾ ಇತ್ತೀಚೆಗಷ್ಟೇ ಟೀಸರ್‌ ಮೂಲಕ ಎಲ್ಲರ ಮುಂದೆ ಬಂದು ನಿಂತಿತ್ತು. ಪರಮೇಶ್ವರ ಗುಂಡ್ಕಲ್‌ ನಿರ್ದೇಶನದ ಮೊದಲ ಸಿನಿಮಾ ಇದಾಗಿದ್ದು, ಈಗಾಗಲೇ ಒಂದಷ್ಟು ಕುತೂಹಲದ ಜತೆಗೆ ಚಿತ್ರದ ಟೀಸರ್‌ ಹೊರಬಂದಿತ್ತು. ಈಗ ಇದೇ ಚಿತ್ರದ ಖಳನ ಫಸ್ಟ್‌ ಲುಕ್ ಅನಾವರಣವಾಗಿದೆ. ಸಪ್ತ ಸಾಗರದಾಚೆ ಎಲ್ಲೋ ಚಿತ್ರದಲ್ಲೂ ಖಳನಾಗಿ ಮಿಂಚು ಹರಿಸಿದ್ದ ರಮೇಶ ಇಂದಿರಾ, ಕೋಟಿ ಅಖಾಡದಲ್ಲೂ ಅಬ್ಬರಿಸಲು ಸಜ್ಜಾಗಿದ್ದಾರೆ.

ಬೆಳ್ಳಗೆ ನೆರೆತ ಕೂದಲು, ಗಡ್ಡ, ಮೀಸೆ, ಕುತ್ತಿಗೆಗೊಂದು ಚೈನು, ಬಾಯಲ್ಲೊಂದು ಸಿಗರೇಟು, ಕಣ್ಣಲ್ಲಿ ಯಾರದೋ ಜೀವನವನ್ನು ಬುಡಮೇಲು ಮಾಡುವ ಸಂಚು. ದಿನೂ ಸಾವ್ಕಾರ್‌ ಪಾತ್ರಕ್ಕೆ ನಟ ರಮೇಶ್‌ ಇಂದಿರಾ ಹೊಸದೊಂದು ಎನರ್ಜಿ ತಂದಂತೆ ಕಾಣಿಸುತ್ತಿದೆ ಎಂದರೆ ಅದರಲ್ಲಿ ಅತಿಶಯೋಕ್ತಿ ಇಲ್ಲ.

ಇದನ್ನೂ ಓದಿ: ಸತ್ಯಂ ಚಿತ್ರದಲ್ಲಿ ತುಳುನಾಡ ದೈವದ ಕಥೆ; ಸೆನ್ಸಾರ್‌ ಪಾಸ್‌, ಶೀಘ್ರದಲ್ಲಿ ಚಿತ್ರಮಂದಿರದಲ್ಲಿ 'ಗಣಪ'ನ ಸಿನಿಮಾ

ಕೋಟಿ ಸಿನಿಮಾದ ಟ...