ಭಾರತ, ಏಪ್ರಿಲ್ 21 -- ಬೆಂಗಳೂರು: ಒತ್ತಡ ಮತ್ತು ಆತಂಕವು (Stress And Anxiety) ಮನುಷ್ಯನ ಮಾನಸಿಕ ಮತ್ತು ದೈಹಿಕ ಆರೋಗ್ಯದ (Human Mental And Physical Health) ಮೇಲೆ ಪರಿಣಾಮ ಬೀರುತ್ತದೆ. ಅನೇಕ ಜನರು ಪ್ರತಿದಿನವೂ ಒತ್ತಡವನ್ನು ಅನುಭವಿಸುತ್ತಾರೆ. ಕೆಲಸ, ಕುಟುಂಬ, ಆರೋಗ್ಯ ಮತ್ತು ಹಣಕಾಸಿಗೆ ಸಂಬಂಧಿಸಿದ ದೈನಂದಿನ ಒತ್ತಡಗಳು ಹೆಚ್ಚಾಗಿ ಹೆಚ್ಚಿನ ಒತ್ತಡದಲ್ಲಿ ಜೀವನ ನಡೆಸುತ್ತಾರೆ. ಉತ್ತಮ ಆರೋಗ್ಯಕ್ಕಾಗಿ, ದೈನಂದಿನ ಜೀವನದಲ್ಲಿ ಒತ್ತಡವನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು. ಒತ್ತಡ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಹೃದ್ರೋಗ, ಆತಂಕದ ಅಸ್ವಸ್ಥತೆಗಳು ಹಾಗೂ ಖಿನ್ನತೆ ಸೇರಿದಂತೆ ಹಲವು ಕಾಯಿಲೆಗಳಿಗೆ ಕಾರಣವಾಗಿ, ಅಪಾಯವನ್ನು ಹೆಚ್ಚಿಸುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಏಪ್ರಿಲ್ ತಿಂಗಳನ್ನು ಒತ್ತಡ ನಿವಾರಣೆ ಜಾಗೃತಿ ಮಾಸವನ್ನಾಗಿ ಆಚರಿಸಲಾಗುತ್ತಿದೆ. ನೀವೇನಾದರೂ ಮಾನಸಿಕ ಸಮಸ್ಯೆ ಹಾಗೂ ಒತ್ತಡಕ್ಕೆ ಒಳಗಾಗಿದ್ದರೆ ಆರೋಗ್ಯ ಇಲಾಖೆಯ 'ಟೆಲಿ ಮನಸ್' ಸಹಾಯವಾಣಿ ಮೂಲಕ ಸಲಹೆ ಸೂಚನೆಗಳನ್ನು ಪಡೆಯಬಹುದು....