ಭಾರತ, ಮೇ 10 -- South Actress Jyotika: ಸೌತ್‌ ಸಿನಿಮಾ ಅದರಲ್ಲೂ ಕಾಲಿವುಡ್‌ ಸಿನಿಮಾ ಇಂಡಸ್ಟ್ರಿಯಲ್ಲಿ ಸ್ಟಾರ್‌ ನಟಿ ಎನಿಸಿಕೊಂಡಿದ್ದಾರೆ ನಟಿ ಜ್ಯೋತಿಕಾ. ಬ್ಲಾಕ್‌ ಬಸ್ಟರ್‌ ಹಿಟ್‌ ಸಿನಿಮಾಗಳನ್ನು ನೀಡುವುದರ ಜತೆಗೆ ಸ್ಟಾರ್‌ ನಟರ ಸಿನಿಮಾಗಳಲ್ಲಿ ನಾಯಕಿಯಾಗಿಯೂ ಮಿಂಚಿದ್ದಾರೆ. ಆದರೆ, ನಿಮಗೆ ನೆನಪಿರಲಿ ನಟಿ ಜ್ಯೋತಿಕಾ ಬಣ್ಣದ ಲೋಕಕ್ಕೆ ಬಂದಿದ್ದೇ ಬಾಲಿವುಡ್‌ನಿಂದ. ಆಳಿದ್ದು ಮಾತ್ರ ಸೌತ್‌ ಚಿತ್ರೋದ್ಯಮದಲ್ಲಿ. ಹಿಂದಿ ಚಿತ್ರರಂಗದಲ್ಲಿ ಕೆರಿಯರ್‌ ಆರಂಭಿಸಿದರೂ, ಅಲ್ಲಿ ಅವರಿಗೆ ಅವಕಾಶಗಳೇ ಸಿಗಲಿಲ್ಲ. ಅದಕ್ಕೆ ಕಾರಣ ಏನಿರಬಹುದು? ಈ ಒಂದು ವಿಚಾರದ ಬಗ್ಗೆ ನಟಿ ಜ್ಯೋತಿಕಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಅಜಯ್‌ ದೇವಗನ್‌ ನಾಯಕನಾಗಿ ನಟಿಸಿದ ಶೈತಾನ್‌ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಒಳ್ಳೆಯ ಕಮಾಯಿಯನ್ನೇ ಮಾಡಿತು. 60 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಈ ಸಿನಿಮಾ 200 ಕೋಟಿಗೂ ಅಧಿಕ ಗಳಿಕೆ ಕಂಡು ಯಶಸ್ವಿಯಾಯ್ತು. ಇತ್ತೀಚಿಗಷ್ಟೇ ಒಟಿಟಿಯಲ್ಲೂ ಬಿಡುಗಡೆಯಾಗಿ ಅಲ್ಲಿಯೂ ಹೆಚ್ಚೆಚ್ಚು ವೀಕ್ಷಣೆ ಪಡ...